27 ರಂದು ಭಾರತ್ ಬಂದ್ ಬೆಂಬಲಿಸಿ, ಎಡಪಕ್ಷಗಳಿಂದ ಪ್ರತಿಭಟನೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವವಾಗಿದ್ದು, ರೈತ ವಿರುದ್ದವಾದ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ, ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಸೆಪ್ಟಂಬರ್ 27ರ ‘ಭಾರತ ಬಂದ್’ಗೆ ಸಂಪೂರ್ಣ ಬೆಂಬಲವನ್ನು ಘೋಷಿಸಿ ಇಂದು ಕಮ್ಯುನಿಸ್ಟ್ ಪಾರ್ಟಿವರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ್ರು. ನಗರದ ವಿವೇಕಾನಂದ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನೆಕಾರರು ದೇಶದಲ್ಲಿನ ೫೫೦ಕ್ಕೂ ಅಧಿಕ ರೈತ ಸಂಘಟನೆಗಳು ಸಂಯುಕ್ತ ಕಿಸಾನ್ ಮೋರ್ಚಾ ಹೆಸರಿನಡಿ ಒಗ್ಗೂಡಿ ಭಾರತ ಬಂದ್ ಕರೆ ನೀಡಿದೆ. ದೇಶದ ಎಲ್ಲಾ ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಮತ್ತು ದಲಿತ ಸಂಘಟನೆಗಳು ಹಾಗೂ ಎಡಪಕ್ಷಗಳು ಬೆಂಬಲಿಸಿ ಭಾಗಿಯಾಗಿ ಯಶಸ್ವಿಗೊಳಿಸುವುದಾಗಿ ಘೋಷಿಸಿವೆ. ಕರ್ನಾಟಕದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಭಾಗವಾಗಿರುವ ಮತ್ತು ರಾಜ್ಯದ ರೈತ - ಕೂಲಿಕಾರ- ಕಾರ್ಮಿಕ- ದಲಿತ- ವಿದ್ಯಾರ್ಥಿ- ಯುವಜನ ಮತ್ತು ಮಹಿಳಾ ಸಂಘಟನೆಗಳ ಒಗ್ಗೂಡಿ ರಚಿತಗೊಂಡಿರುವ ಸಂಯುಕ್ತ ಹೋರಾಟ - ಕರ್ನಾಟಕವು ಸಂಯುಕ್ತ ಕಿಸಾನ್ ಮೋರ್ಚಾದ ಹಕ್ಕೊತ್ತಾಯಗಳೊಂದಿಗೆ ರಾಜ್ಯ ಸರಕಾರದ ಕಾರ್ಪೊರೇಟ್ ಕಂಪನಿಗಳ ಪರವಾದ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ಕರ್ನಾಟಕ ಬಂದ್ ಗೆ ಕರೆ ನೀಡಿದ್ರು