ಎಂಇಎಸ್ ಪುಂಡಾಟ, ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್.?

ಎಂಇಎಸ್ ಪುಂಡಾಟ, ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್.?

ಎಂಇಎಸ್ ಪುಂಡಾಟಿಕೆ ವಿರುದ್ಧ ಕನ್ನಡ ಪರ ಸಂಘಟನೆಗಳು ಆಕ್ರೋಶದ ಜೊತೆಗೆ ಎಂಇಎಸ್ ಬ್ಯಾನ್‌ ಗೆ ಒತ್ತಾಯಿಸಿದ್ದಾರೆ. ಹೀಗಾಗಿ ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದು ವುಡ್‌ ಲ್ಯಾಂಡ್ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸ್ತಿದ್ದಾರೆ.‌

ಮೊನ್ನೆ ಮೈಸೂರು ಬ್ಯಾಂಕ್ ನಲ್ಲಿ ನಡೆದ ಪ್ರತಿಭಟನೆ ವೇಳೆ ಎಂಇಎಸ್ ನ್ನು ಎರಡು ದಿನ ಒಳಗಡೆ ಬ್ಯಾನ್ ಮಾಡದಿದ್ರೆ ಕರ್ನಾಟಕ ಬಂದ್ ಮಾಡ್ತೀವಿ ಎಂದು ಹೇಳಿದ್ರು.

ಹೀಗಾಗಿ ಇಂದು ನಡೆಸುವ ಸುದ್ದಿಗೋಷ್ಠಿಯಲ್ಲಿ, ಸರ್ಕಾರಕ್ಕೆ ಎಚ್ಚರಿಕೆ ನೀಡೋದ್ರ ಜೊತೆಗೆ ಕರ್ನಾಟಕ ಬಂದ್ ಕರೆ ನೀಡುವ ಸಾಧ್ಯತೆ ಇದೆ.