ಬೆಂಗಳೂರಿನಲ್ಲಿ ಬೆಂಕಿ ಪಟ್ಟಣದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್

ಬೆಂಗಳೂರು: ರಾಜ್ಯದಲ್ಲಿ ಗಾಂಜಾ ಮಾರಾಟ ದಂಧೆ ಜೋರಾಗಿದೆ. ಬೆಂಗಳೂರಿನಲ್ಲಿ ಬೆಂಕಿ ಪೊಟ್ಟಣಗಳಲ್ಲಿ ಡ್ರಗ್ಸ್ ಇಟ್ಟು ಅವುಗಳ ಮೂಲಕ ಮಾರಾಟ ಮತ್ತು ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ನಿರ್ಜನ ಪ್ರದೇಶವನ್ನು ಗುರುತು ಮಾಡಿಕೊಂಡಿದ್ದರು. ಡ್ರಗ್ಸ್ ತುಂಬಿರುವ ಮ್ಯಾಚ್ ಬಾಕ್ಸ್‌ಗಳನ್ನು ಎಸೆದು ಹೋಗುತ್ತಿದ್ದರು. ಜೊತೆಗೆ ಆ ಮ್ಯಾಚ್ ಬಾಕ್ಸ್‌ನ ಫೋಟೋ ಜೊತೆಗೆ ಲೋಕೆಷನ್ ಶೇರ್ ಮಾಡುತ್ತಿದ್ದರು.ಡ್ರಗ್ಸ್ ಮಾರಾಟ ಮಾಡುವ ವೇಳೆ ಮೊದಲಿಗೆ ಫೋನ್‌ನಲ್ಲೇ ಫೋಟೋಗಳು, ಲೋಕೇಷನ್ ಶೇರ್ ಮಾಡಿಕೊಂಡು ಹಣ ತೆಗೆದುಕೊಳ್ಳುತ್ತಿದ್ದರು.
ಹಣ ಕೊಟ್ಟ ಗ್ರಾಹಕರು, ಆ ಲೋಕೇಷನ್‌ಗೆ ಹೋಗಿ ಯಾರಿಗೂ ಅನುಮಾನ ಬಾರದಂತೆ ಡ್ರಗ್ಸ್ ತೆಗೆದುಕೊಂಡು ಹೋಗುತ್ತಿದ್ದರು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಕೊತ್ತನೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.