ಶೀಘ್ರದಲ್ಲೇ ಮೈಸೂರು, ತುಮಕೂರು ಬೆಂಗಳೂರಿಗೆ ಡಬಲ್ ಡೆಕ್ಕರ್, ಎಸಿ ಬಸ್‌

ಶೀಘ್ರದಲ್ಲೇ ಮೈಸೂರು, ತುಮಕೂರು ಬೆಂಗಳೂರಿಗೆ ಡಬಲ್ ಡೆಕ್ಕರ್, ಎಸಿ ಬಸ್‌

ಬೆಂಗಳೂರು : ಪ್ರಯಾಣಿಕರ ಅನುಕೂಲಕ್ಕಾಗಿ ಮೊದಲ ಬಾರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪ್ರಾಯೋಗಿಕ ಕಾರ್ಯಕ್ರಮದ ಅಡಿಯಲ್ಲಿ ಮೈಸೂರು, ತುಮಕೂರು ಬೆಂಗಳೂರಿನ ನಗರದೊಳಗಿನ ಪ್ರಯಾಣಕ್ಕಾಗಿ ಡಬಲ್ ಡೆಕ್ಕರ್, ಎಸಿ ಬಸ್‌ ಸೇವೆಯನ್ನು ಜುಲೈ ತಿಂಗಳಲ್ಲಿ ಒದಗಿಸಲು ನಿರ್ಧಾರಿಸಿದೆ

ಸಾಂಸ್ಕೃತಿಕ ನಗರಿ ಮೈಸೂರನ್ನು ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಮೈಸೂರಿನಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಡಬಲ್‌ ಡೆಕ್ಕರ್‌ ಬಸ್‌ ಸೇವೆ ಕಲ್ಪಿಸಿದೆ, ಓಪನ್ ಟಾಪ್ ಮಾದರಿಯ ಈ ಬಸ್‌ಗಳು ನಗರದಲ್ಲಿ ಮೂರು ಟ್ರಿಪ್ ಸಂಚರಿಸುತ್ತಿದ್ದು, 250 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಇದರ ಅನುಕೂಲವನ್ನು ಪ್ರವಾಸಿಗರು ಪಡೆಯುತ್ತಿದ್ದಾರೆ.

ಕರ್ನಾಟಕದಲ್ಲಿ ಇದುವರೆಗೆ ಡಬಲ್ ಡೆಕ್ಕರ್ ಬಸ್‌ಗಳನ್ನು ಹೊಂದಿರುವ ಏಕೈಕ ನಗರವೆಂದರೇ ಬೆಂಗಳೂರು. ತುಮಕೂರು ಬೆಂಗಳೂರಿನ ಪಕ್ಕದಲ್ಲಿದ್ದು, ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳ ಜನಸಂಖ್ಯೆಯಿಂದಾಗಿ ಡಬಲ್ ಡೆಕ್ಕರ್ ಬಸ್‌ಗಳ ಸೇವೆಯನ್ನು ಅನುಕೂಲ ಪಡೆಯಲಿದ್ದಾರೆ.

ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಸೇವೆ ಒದಗಿಸುವ ಉದ್ದೇಶದಿಂದ ಎರಡೂ ನಗರಗಳಿಗೆ ಮೊದಲ ಹಂತದಲ್ಲಿ ತಲಾ 5 ಡಬಲ್ ಡೆಕರ್ ಎಲೆಕ್ಟ್ರಿಕ್ ಬಸ್‌ಗಳು ಸಿಗಲಿವೆ . ಈ ವರ್ಷಾಂತ್ಯದ ಒಳಗೆ ಇದು ಕಾರ್ಯಸಾಧ್ಯವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಹೇಳಿದ್ದಾರೆ