ಮೊದಲ ದಿನ 'ಕ್ರಾಂತಿ' ಗಳಿಕೆ ಎಷ್ಟು? ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರವೇನು

ಮೊದಲ ದಿನ 'ಕ್ರಾಂತಿ' ಗಳಿಕೆ ಎಷ್ಟು? ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರವೇನು

2023ರಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಸೂಪರ್‌ಸ್ಟಾರ್ ಸಿನಿಮಾ 'ಕ್ರಾಂತಿ'. ಕಳೆದ ವರ್ಷ ಸ್ಯಾಂಡಲ್‌ವುಡ್‌ನ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆದಿದ್ದವು. ಈ ವರ್ಷನೂ ಅದೇ ಯಶಸ್ಸನ್ನು ಮುಂದುವರೆಸುತ್ತಾ? ಅನ್ನೋ ಪ್ರಶ್ನೆಗೆ 'ಕ್ರಾಂತಿ' ಆರಂಭಿಕ ಉತ್ತರ ಕೊಡಲಿದೆ.

ಮಾಸ್ ಲೀಡರ್ ದರ್ಶನ್ ಸಿನಿಮಾ ಹೇಗೆ ಇದ್ದರೂ ಮೊದಲ ವಾರ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುವುದು ಪಕ್ಕಾ. ಈ ಕಾರಣಕ್ಕೆ ಫಸ್ಟ್ ಡೇ 'ಕ್ರಾಂತಿ' ಸಿನಿಮಾದ ಕಲೆಕ್ಷನ್ ಎಷ್ಟಾಗಬಹುದು ಅನ್ನೋ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.