ಅತಿ ಶೀಘ್ರದಲ್ಲೇ ನಿಮ್ಮ ಟಿವಿ ಪರದೆ ಮೇಲೆ ಬಿಗ್ ಬಾಸ್ ಕನ್ನಡ ಸೀಸನ್ 9

ಸ್ಮಾಲ್ ಸ್ಕ್ರೀನ್ನ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 9 ಗಾಗಿ ಜನರು ಕಾತುರದಿಂದ ಕಾಯುತ್ತಿದ್ದಾರೆ. ಬಿಗ್ ಬಾಸ್ ಓಟಿಟಿಯಲ್ಲಿ ಮುಕ್ತಾಯಗೊಳ್ಳಲು ಕೇವಲ ಎರಡು ವಾರ ಬಾಕಿ ಇದೆ. ಈ ಬೆನ್ನಲ್ಲೇ ಕಲರ್ಸ್ ಕನ್ನಡ ವಾಹಿನಿ ಪ್ರೇಕ್ಷಕರಿಗೆ ಸಿಹಿ ಸುದ್ದಿ ಕೊಟ್ಟಿದ್ದು, ಅತಿ ಶೀಘ್ರದಲ್ಲೇ ಟಿವಿ ಪರದೆ ಮೇಲೆ ಪ್ರೇಕ್ಷಕರು ಬಿಗ್ ಬಾಸ್ ಹೊಸ ಸೀಸನ್ ನೋಡಬಹುದಾಗಿದೆ. ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ನಲ್ಲಿ ಸದ್ಯ 9 ಸ್ಪರ್ಧಿಗಳು ಇದ್ದಾರೆ. ಇವರ ಪೈಕಿ ಮೂವರು ಟಿವಿಯಲ್ಲಿ ಪ್ರಸಾರವಾಗುವ ಬಿಗ್ಬಾಸ್ ಸೀಸನ್ಗೆ ಕಾಲಿಡಲಿದ್ದಾರೆ. ಇದರ ಜತೆಗೆ ಹೊಸದಾಗಿ 13 ಸ್ಪರ್ಧಿಗಳು ದೊಡ್ಮನೆ ಸೇರಲಿದ್ದಾರೆ.
ಎಲ್ಲಾ ರಿಯಾಲಿಟಿ ಶೋಗಳ ಬಿಗ್ಬಾಸ್ | ಬರ್ತಿದೆ ಸೀಸನ್ ಒಂಭತ್ತು#BBK9 #ಬಿಗ್ಬಾಸ್ಕನ್ನಡ9 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/A89IUtv4FU
— Colors Kannada (@ColorsKannada) September 7, 2022
ಆಗಸ್ಟ್ನಲ್ಲಿ ಶುರುವಾದ ಮಿನಿ ಸೀಸನ್ ಅಕ್ಟೋಬರ್ನಲ್ಲಿ ಮುಕ್ತಾಯವಾಗಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಸೀಸನ್ ಪ್ರಸಾರವಾಗ್ತಿದ್ದು ಈ ಸೀಸನ್ 100 ದಿನಗಳ ಕಾಲ ನಡೆಯಲಿದೆ. ಇದೀಗ ಸುದೀಪ್ ಇರುವ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದ್ದು, ಶೀಘ್ರದಲ್ಲೇ ಶುರುವಾಗಲಿದೆ.