ನಟಿ ಮೇಘಾ ಶೆಟ್ಟಿ ವಿರುದ್ಧ ದರ್ಶನ್‌ ಪತ್ನಿ ಗರಂ : ʼನಾನ್‌ಸೆನ್ಸ್ʼ ತಡೆದುಕೊಳ್ಳಲ್ಲ ಎಂದ ವಿಜಯಲಕ್ಷ್ಮಿ

ನಟಿ ಮೇಘಾ ಶೆಟ್ಟಿ ವಿರುದ್ಧ ದರ್ಶನ್‌ ಪತ್ನಿ ಗರಂ : ʼನಾನ್‌ಸೆನ್ಸ್ʼ ತಡೆದುಕೊಳ್ಳಲ್ಲ ಎಂದ ವಿಜಯಲಕ್ಷ್ಮಿ

ಇತ್ತೀಚಿಗೆ ನಟ ದರ್ಶನ್ ಅವರ 46ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ. ಇಡೀ ರಾತ್ರಿ ದರ್ಶನ್ ಅವರು ಸಹ ಶಾಂತವಾಗಿ ನಿಂತು ತಮ್ಮ ಸೆಲೆಬ್ರೆಟಿಗಳನ್ನು ಭೇಟಿ ಮಾಡಿದರು. ಇದೀಗ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರು ವಿಡಿಯೋ ಒಂದು ಹಂಚಿಕೊಳ್ಳುವ ಮೂಲಕ ನಟಿ ಮೆಘಾ ಶೆಟ್ಟಿಯವರಿಗೆ ಡೈರೆಕ್ಟ್‌ ಆಗಿ ವಾರ್ನಿಂಗ್‌ ನೀಡಿದ್ದಾರೆ.

ಅಷ್ಟಕ್ಕೂ ವಿಜಯಲಕ್ಷ್ಮಿಯವರು ಈ ರೀತಿಯ ಗರಂ ಆಗಿದ್ದಾದ್ರೂ ಯಾಕೆ ಅಂತೀರಾ.. ಈ ಫುಲ್‌ ಸ್ಟೋರಿ ಓದಿ.

ದರ್ಶನ್‌ ಅವರುನಲ್ಲಿ ಬಹು ದೊಡ್ಡ ಆತ್ಮೀಯ ಬಳಗ ಹೊಂದಿದ್ದಾರೆ. ಚಿತ್ರರಂಗದ ಗೆಳೆಯರೆಲ್ಲ ಅವರ ಮನೆಗೆ ಹೋಗಿ ವಿಶ್ ಮಾಡಿ ಬಂದಿದ್ದರು, ಕೆಕ್‌ ಕಟ್‌ ಮಾಡಿ ಸಂಭ್ರಮಿಸಿದ್ದರು. ಆದ್ರೆ, ನಟಿ ಮೇಘಾ ಶೆಟ್ಟಿ, ಪವಿತ್ರಾ ಗೌಡ ಸೇರಿದಂತೆ ಅವರ ಸ್ನೇಹಿತರು ಸ್ಪೆಷಲ್ ಆಗಿ ದಚ್ಚು ಬರ್ತ್‌ ಡೇ ಸೆಲೆಬ್ರೆಟ್‌ ಮಾಡಿದರು. ಈ ಕುರಿತು ವಿಡಿಯೋ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಇದೀಗ ಇದೇ ವಿಡಿಯೋ ವಿಜಯಲಕ್ಷ್ಮೀ ಅವರ ಕೋಪಕ್ಕೆ ಮುಖ್ಯ ಕಾರಣವಾಗಿದೆ.