ಅಮ್ಮಿನಬಾವಿ ಜಾಕ್ ವೆಲ್ ಗೆ ಭೇಟಿ ನೀಡದ ಹುಧಾ ಮೇಯರ್ | ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ | Dharwad |
ಅವಳಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿರುವ ಹಿನ್ನೆಲೆ, ಹುಬ್ಬಳ್ಳಿ ಧಾರವಾಡದ ಮಹಾನಗರ ಪಾಲಿಗೆ ಮಹಾಪೌರರಾದ ಈರೇಶ್ ಅಂಚಟಗೇರಿಯವರು, ಅಮ್ಮಿನಬಾವಿ ಜಾಕ್ ವೆಲ್ ಗೆ ಭೇಟಿ ನೀಡಿ ಸಮಸ್ಯೆಯ ಮೂಲದ ಬಗ್ಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಎಲ್&ಟಿ ಅಧಿಕಾರಿಗಳಿಗೆ ನೀರು ಪೂರೈಕೆ ವೇಳೆ ಉಂಟಾಗುತ್ತಿರುವ ಸಮಸ್ಯೆಗಳಿಗೆ ಕಾರಣವನ್ನು ತಿಳಿದುಕೊಂಡು ಶೀಘ್ರದಲ್ಲಿ ಪರಿಹಾರ ಒದಗಿಸುವ ಬಗ್ಗೆ ಸೂಚನೆ ನೀಡಿದರು. ಇದೇ ವೇಳೆ ಜಾಕ್ ವೆಲ್ ಕಾಮಗಾರಿಯ ಬಗ್ಗೆ ಪರಿಶೀಲನೆ ನಡೆಸಿದ, ಅವರು, ಅತೀ ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯ ಬಗ್ಗೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು, ಶೀಘ್ರದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸದಿದ್ದರೆ, ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಆಯುಕ್ತರಾದ ಗೋಪಾಲಕೃಷ್ಣ , ಪಾಲಿಕೆಯ ಸದಸ್ಯರಾದ ಶಂಕರ ಶೇಳಕೆ, ಚಂದ್ರಶೇಖರ ಮನಗುಂಡಿ ರವರು, ನೀಲವ್ವ ಅರವಳದ, ಅನಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.