ಜಮೀನು ಸರ್ವೆ ಮಾಡಿಕೊಡಲು 70 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರ ಸೆರೆ

ಜಮೀನು ಸರ್ವೆ ಮಾಡಿಕೊಡಲು 70 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರ ಸೆರೆ

ಬೆಂಗಳೂರು, ; ಜಮೀನಿನ ಸುತ್ತಳತೆ ನಿಗಧಿ ಪಡಿಸಲು 70ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಆನಂದ್ ಕುಮಾರ್ ಮತ್ತು ಆತನ ಮೂವರು ಸಹಾಯಕ ಸಿಬ್ಬಂದಿಯನ್ನು ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಅಧಿಕಾರಿಗಳು ವ್ಯವಸ್ಥಿತವಾಗಿ ದಾಳಿ ಮಾಡಿ ಬಂಧಿಸಿದ್ದಾರೆ. ಜಮೀನಿಗೆ ಸುತ್ತಳತೆ ನಿಗಧಿ ಪಡಿಸಿ ಗೆರೆ ಎಳೆಯಲು 70 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟ ದೂರಿನ ಸಂಬಂಧ ನಿನ್ನೆ ರಾತ್ರಿ ನಗರದ ಮೂರು ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಬಳಿಯ ಕುದುರುಗೆರೆಯ ಜಮೀನು ಸರ್ವೆ ನಂ. 145, 146ಕ್ಕೆ ಸುತ್ತಳತೆ ನಿಗಧಿ ಪಡಿಸಿ ಗೆರೆ ಎಳೆಯಲು ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಮುಂಗಡವಾಗಿ 20 ಲಕ್ಷ ರೂ ಹಣ ಅಲ್ಲದೇ ಬ್ಯಾಂಕ್ ಚೆಕ್ ಪಡೆದಿದ್ದ.

ಇದರ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದು ಅನಂದ್ ಕುಮಾರ್ ಅವರ ಜಾಲಹಳ್ಳಿ ಮನೆ ಕುಸುಮಲತಾ ಮನೆ ಮತ್ತು ಸರ್ವೆ ಅಧಿಕಾರಿ ಶ್ರೀನಿವಾಸ್?ಗೆ ಸೇರಿದ ತುಮಕೂರಿನ ಮನೆ ಸೇರಿ ಮೂರು ಕಡೆ ದಾಳಿ ನಡೆಸಿದ್ದರು. ದಾಳಿ ವೇಳೆ ಅಧಿಕಾರಿಗಳು ಆನಂದ್ ಮನೆಯಲ್ಲಿ 25.30 ಲಕ್ಷ ನಗದು, 70 ಲಕ್ಷ ಮೊತ್ತದ ಮೂರು ಚೆಕ್ ಹಾಗೂ ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಕುಸುಮಾ ಲತಾ ಮನೆಯಲ್ಲಿ ಏನೂ ಸಿಕ್ಕಿಲ್ಲ. ಸರ್ವೆಯರ್ ಶ್ರೀನಿವಾಸ್ ಮನೆಯಲ್ಲಿ ಕೆಲ ದಾಖಲೆಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.