ನಂದಿನಿ ಹಾಲಿನ ಬೂತ್ಗೆ ಕನ್ನ ಹಾಕಿದ ಕಳ್ಳರು | Chikballapur | Nandini Milk |

ಚಿಕ್ಕಬಳ್ಳಾಪುರ ನಗರದ ಜ್ಯೂನಿಯರ್ ಕಾಲೇಜು ಮುಂಭಾಗದಲ್ಲಿರುವ ನಂದಿನಿ ಹಾಲಿನ ಬೂತ್ ನಲ್ಲಿ ಕಳ್ಳತನ ನಡೆದಿದ್ದು, ಹಾಲಿನ ಬೂತ್ ಮಾಲಿಕ ಬೆಳಿಗ್ಗೆ ಅಂಗಡಿ ತೆರೆದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಅಂಗಡಿ ಮೇಲ್ಭಾಗದಲ್ಲಿರುವ ಕಬ್ಬಿಣದ ಶೀಟ್ ಕತ್ತರಿಸಿ ಒಳಗೆ ನುಗ್ಗಿರುವ ಕಳ್ಳರು ಹಾಲಿನ ಕೇಂದ್ರದಲ್ಲಿರುವ ನಂದಿನಿ ಬ್ರ್ಯಾಂಡ್ನ ವಿವಿಧ ರೀತಿಯ ಹಾಲು, ಮೊಸರು, ಮಜ್ಜಿಗೆ ಉತ್ಪನ್ನಗಳನ್ನು ಬಿಟ್ಟು ಕೇವಲ ಜಾಮೂನು ಹಾಗೂ ಬಾದಾಮಿ ಪೌಡರ್ ಪಾಕೇಟ್ಗಳು ಸೇರಿ ಸಾವಿರ ರೂಪಾಯಿ ವರೆಗೂ ಇರುವ ಚಿಲ್ಲರೆ ಕಾಸನ್ನು ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇಲ್ಲಿ ಯಾವುದೇ ಸಿಸಿ ಕ್ಯಾಮರಾಗಳಿಲಲ್ಲ ಹಾಗಾಗಿ ಇಂತಹ ಅನಾಹುತಗಳು ನಡೆಯುತ್ತವೆ. ಪೊಲೀಸ್ ಇಲಾಖೆ ಈ ಭಾಗದಲ್ಲಿ ಒಂದು ಸಿಸಿ ಕ್ಯಾಮರಾ ಅಳವಡಿಸಿದರೆ ಉತ್ತಮ ಎನ್ನುತ್ತಾರೆ ಪಕ್ಕದ ಅಂಗಡಿ ಮಾಲೀಕರು.