1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ: ಎಡಿಜಿಪಿ ಅಲೋಕ್ ವಿಚಾರಣೆ

1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ: ಎಡಿಜಿಪಿ ಅಲೋಕ್ ವಿಚಾರಣೆ

ಬೆಂಗಳೂರು: ಒಂದು ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ 'ಬಿ' ವರದಿಯನ್ನು ತಿರಸ್ಕರಿ ಸಿರುವ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾ ಲಯ, ನೇರ ವಿಚಾರಣೆ ಆರಂಭಿಸಲು ನಿರ್ಧರಿಸಿದೆ.

2015ರಲ್ಲಿ ವ್ಯಕ್ತಿಯೊಬ್ಬರಿಂದ ₹ 1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಅಲೋಕ್‌ ಕುಮಾರ್, ಶೇಷಾದ್ರಿಪುರ ಉಪ ವಿಭಾಗದ ಆಗಿನ ಎಸಿಪಿ ದಾನೇಶ್ವರ್‌ ರಾವ್‌ ಮತ್ತು ವೈಯಾಲಿಕಾವಲ್‌ ಪೊಲೀಸ್‌ ಠಾಣೆಯ ಆಗಿನ ಇನ್‌ಸ್ಪೆಕ್ಟರ್‌ ಶಂಕರಾಚಾರಿ ವಿರುದ್ಧ ಸಲ್ಲಿಕೆಯಾಗಿದ್ದ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು 'ಬಿ' ವರದಿ ಸಲ್ಲಿಸಿದ್ದರು.

ನ್ಯಾಯಾಲಯದ ಆದೇಶದಲ್ಲೇನಿದೆ?

'ಸಾಕ್ಷಿಯಾಗಿದ್ದ ಪುಟ್ಟೇಗೌಡ ಅವರ ಹೇಳಿಕೆಯನ್ನು ತನಿಖಾಧಿಕಾರಿ ನಂಬಿಲ್ಲ. ಸಾಕ್ಷಿಯ ಹೇಳಿಕೆಯ ಕುರಿತು ಅಭಿಪ್ರಾಯ ನೀಡಬೇಕಿರುವುದು ನ್ಯಾಯಾಲಯವೇ ಹೊರತು ತನಿಖಾಧಿಕಾರಿಯಲ್ಲ. ಪುಟ್ಟೇಗೌಡರ ಹೇಳಿಕೆಯನ್ನು ಪುಷ್ಟೀಕರಿಸುವಂತಹ ಸಾಕ್ಷ್ಯಗಳು ಲಭಿಸಿಲ್ಲ ಎಂಬ ತನಿಖಾಧಿಕಾರಿಯ ತೀರ್ಮಾನವು ಸಮರ್ಥನೀಯವಲ್ಲ. ನೇರವಾದ ಸಾಕ್ಷ್ಯಗಳು ಲಭ್ಯವಿರುವಾಗ ಆರೋಪ ಪುಷ್ಟೀಕರಿಸುವಂತಹ ಇತರ ಸಾಕ್ಷ್ಯ ಗಳ ಅಗತ್ಯವಿಲ್ಲ. ತನಿಖಾ ಧಿಕಾರಿಯು ಲಭ್ಯ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದಿಡುವ ಬದಲಿಗೆ ಆರೋಪಿ ಗಳನ್ನು ರಕ್ಷಿಸುವ ಪ್ರಯತ್ನ ಮಾಡಿ ದ್ದಾರೆ' ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

'ಆರೋಪಿಗಳು ಲಂಚಕ್ಕೆ ಬೇಡಿಕೆ ಇಟ್ಟಿರುವುದು ಹಾಗೂ ಪಡೆದಿರುವ ಕುರಿತು ವಿಚಾರಣೆಯ ಅಗತ್ಯವಿದೆ. ಅಂತಿಮ ವರದಿಯು ಸಮಗ್ರ ಹಾಗೂ ಪಾರದರ್ಶಕವಾಗಿಲ್ಲ. ತನಿಖೆಯೂ ಸಂಪೂರ್ಣವಾಗಿಲ್ಲ. ಆರೋಪಿಗಳ ವಿರುದ್ಧ ವಿಚಾರಣೆ ಆರಂಭಿಸಿ, ಸಮನ್ಸ್‌ ಜಾರಿಗೊಳಿಸಲು ಪೂರಕವಾದ ಹಲವು ಸಾಕ್ಷ್ಯಗಳು ತನಿಖಾಧಿಕಾರಿ ಸಲ್ಲಿಸಿರುವ 'ಬಿ' ವರದಿಯೊಳಗೇ ಇವೆ. ಪ್ರಕರಣವನ್ನು ಮುಕ್ತಾಯಗೊಳಿಸಲು ತನಿಖಾಧಿಕಾರಿ ಕೈಗೊಂಡಿರುವ ತೀರ್ಮಾನ ಸಮರ್ಪಕವಾಗಿಲ್ಲ' ಎಂದು ನ್ಯಾಯಾಧೀಶರು 'ಬಿ' ವರದಿಯನ್ನು ತಿರಸ್ಕರಿಸುವ ತೀರ್ಮಾನದಲ್ಲಿ ಹೇಳಿದ್ದಾರೆ.