ನೆದರ್ಲೆಂಡ್ಸ್- ಈಕ್ವೆಡಾರ್ ಪಂದ್ಯ 1-1 ಡ್ರಾ, ಫಿಫಾ ವಿಶ್ವಕಪ್ ನಿಂದ ಹೊರಬಿದ್ದ ಕತಾರ್

ನೆದರ್ಲೆಂಡ್ಸ್- ಈಕ್ವೆಡಾರ್ ಪಂದ್ಯ 1-1 ಡ್ರಾ, ಫಿಫಾ ವಿಶ್ವಕಪ್ ನಿಂದ ಹೊರಬಿದ್ದ ಕತಾರ್

ನೆದರ್ಲೆಂಡ್ಸ್ ಮತ್ತು ಈಕ್ವೆಡಾರ್ ತಂಡಗಳು ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯ 1-1 ಗೋಲಿನಿಂದ ಡ್ರಾದಲ್ಲಿ ಅಂತ್ಯಗೊಂಡಿದೆ. ಈ ಮೂಲಕ ಆತಿಥೇಯ ಕತಾರ್ ತಂಡ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಎಂಬ ಕುಖ್ಯಾತಿಗೆ ಪಾತ್ರವಾಯಿತು.

ಶುಕ್ರವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ನೆದರ್ಲೆಂಡ್ಸ್ ಪರ ಕೋಡಿ ಗಾಪೊ (6ನೇ ನಿಮಿಷ) ಮತ್ತು ಈಕ್ವೆಡಾರ್ ಪರ ಎನ್ನಾರ್ ವೆಲೆನ್ಸಿಯಾ (49ನೇ ನಿಮಿಷ) ತಲಾ ಒಂದು ಗೋಲು ಸಿಡಿಸಿದರು.

ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದರಿಂದ ಕತಾರ್ ತಂಡ ಗುಂಪಿನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದು, ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಎಂಬ ಕುಖ್ಯಾತಿಗೆ ಆತಿಥೇಯರು ಪಾತ್ರರಾದರು.