ಕಿಲ್ಲರ್ 'BMTC' ಗೆ ಬೆಂಗಳೂರಿನಲ್ಲಿ ಮತ್ತೊಂದು ಬಲಿ : ಬಸ್ ಹರಿದು ಬೈಕ್ ಸವಾರ ಸಾವು

ಕಿಲ್ಲರ್ 'BMTC' ಗೆ ಬೆಂಗಳೂರಿನಲ್ಲಿ ಮತ್ತೊಂದು ಬಲಿ : ಬಸ್ ಹರಿದು ಬೈಕ್ ಸವಾರ ಸಾವು

ಬೆಂಗಳೂರು : ಬಿಎಂಟಿಸಿ ಬಸ್ ( BMTC) ಹರಿದು ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೃತನನ್ನು 30 ವರ್ಷದ ದೀಪಕ್ ಎಂದು ಗುರುತಿಸಲಾಗಿದೆ. ಪೀಣ್ಯಾದ 14ನೇ ಕ್ರಾಸ್ ಬಳಿ ಭೀಕರ ಘಟನೆ ನಡೆದಿದ್ದು, ಹೆಲ್ಮೆಟ್ ಧರಿಸದದೇ ಅತಿ ವೇಗದಿಂದ ಬಸ್ ಓವರ್ ಟೇಕ್ ಮಾಡಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಿಎಂಟಿಸಿ ಬಸ್, ಎಡಭಾಗದಿಂದ ಓವರ್ ಟೇಕ್ ಮಾಡಲು ಹೋದ ಬೈಕ್ ಸವಾರ ದೀಪಕ್ ಚಕ್ರಕ್ಕೆ ಸಿಲುಕಿ 30 ಸಾವನ್ನಪ್ಪಿದ್ದಾರೆ.ಮೃತ ದೀಪಕ್ ಮೂಲತಃ ವಾರಣಾಸಿ ನಿವಾಸಿಯಾಗಿದ್ದು, ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ದೀಪಕ್ ಬಸ್ ಗೆ ಸಿಲುಕಿ ಮೃತಪಟ್ಟಿದ್ದಾರೆ.

ಸಾಂದರ್ಭಿಕ ಚಿತ್ರ