ಸಾಬಿಯಾ ಸೈಫಿ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ದೇಶದ ರಾಜಧಾನಿ ದೆಹಲಿಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಪೊಲೀಸ್ ಪೇದೆ ಸಾಬಿಯಾ ಸೈಫಿ ಮಹಿಳೆ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಅತ್ಯಾಚಾರ ಮಾಡಿ, ಕೊಲೆ ಮಾಡಿರುವುದನ್ನು ಖಂಡಿಸಿ ಇಂದು ನಗದರಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು. ಸಾಬಿಯಾ ಸೈಪಿಯ ಮೇಲೆ ನಡೆದ ಅತ್ಯಾಚಾರ ಹಲ್ಲೆ ಪ್ರಕರಣ ಖಂಡಿಸಿ ಹೆಣ್ಣು ಮಗಳ ಕುಟುಂಬಕ್ಕೆ ನ್ಯಾಯ ಸಿಗಬೇಕು, ಕೃತ್ಯಗೈದವರಿಗೆ ಶಿಕ್ಷೆಯಾಗಲಿ ಎಂದು ಚಿಕ್ಕಬಳ್ಳಾಪುರ ನಗರದ ಭುವನೇಶ್ವರ ವೃತ್ತದಿಂದ ಬಜಾರ್ ರಸ್ತೆ, ಬಿಬಿ ರಸ್ತೆ ಮೂಲಕ ಮೆರವಣಿಗೆ ಬಂದು ಶಿಡ್ಲಘಟ್ಟ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಆರೋಪಿಗಳನ್ನು ಬಂದಿಸುವಂತೆ ಘೋಷಣೆ ಕೂಗಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ವಕ್ಪ್ ಬೋರ್ಡ್ ಅದ್ಯಕ್ಷ ಮತ್ತು ಡಾ. ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ರಾಜ್ಯಾಧ್ಯಕ್ಷ ನಂದಿ ಎಂ ಬಾಷ ಮಾತನಾಡಿ ದೆಹಲಿ ಕ್ರೇಜಿವಾಲ್ ಸರ್ಕಾರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ವಿಫಲವಾಗಿದೆ. ಕೆಂದ್ರ ಸರ್ಕಾರ ದೆಹಲಿ ಸರ್ಕಾರವನ್ನು ವಜಾ ಮಾಡಬೇಕು, ಕೇಂದ್ರ ಸರ್ಕಾರ ಆರೋಪಿಗಳನ್ನು ಬಂಧಿಸಿ ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸಿದರು. ಈ ಪ್ರತಿಭಟನೆಯಲ್ಲಿ ಸುಹೇಲ್ ಪಾಷ ಯುವ ಮುಖಂಡರು, ಆಸೀಫ್, ಸಮೀಉಲ್ಲ, ಬಾಬಜಾನ್, ಮುದಸ್ಸಿರ್ ದಾವುದ್, ಮುಬಾರಕ್, ಸಮ್ಮು, ನಯಾಜ್, ಖಲೀಲ್, ಅಫ್ಜಲ್, ಉಮೇಜ್ ತಬರೇಜ್ ನವಾಜ್ ರೆಹಮನ್ ಹಾಗೂ ನೂರಾರು ಮುಸ್ಲಿಂ ಸಮುದಾಯದವರು ಭಾಗಿಯಾಗಿದ್ದರು.