ಭೀಕರ ರಸ್ತೆಅಪಘಾತ; ಇಬ್ಬರು ಮಹಿಳೆಯರ ದುರ್ಮರಣ

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ಕೆ.ಆರ್.ಪುರಂ ಬಳಿ ನಡೆದಿದೆ. ತಡರಾತ್ರಿ ಇನೊವಾ ಕಾರು ಢಿಕ್ಕಿಯಾಗಿ ಆಟೋದಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ತಾಸೀನಾ, ಸೋದರಿ ಫಾಝಿಲಾ ಮೃತ ದುರ್ದೈವಿಗಳು. ಕೆ.ಆರ್.ಪುರಂ ಬಳಿ ಆಟೋಗೆ ಇನೊವಾ ಕಾರು ಢಿಕ್ಕಿ ಹೊಡೆದಿದೆ. ಕಾರು ಢಿಕ್ಕಿಯಾದ ಪರಿಣಾಮ ತಾಸೀನಾ, ಪಾಝಿಲಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಕಾರು ಸಮೇತ ಚಾಲಕ ಪರಾರಿಯಾಗಿದ್ದು, ಕೆ.ಆರ್.ಪುರಂ ಠಾಣೆಯಲ್ಲಿ ಹಿಟ್ & ರನ್ ಕೇಸ್ ದಾಖಲಾಗಿದೆ.