ಯೋಗಿ ಆದಿತ್ಯನಾಥ್ ರನ್ನ ರಕ್ತ ಕುಡಿಯುವ ರಾಕ್ಷಸನಿಗೆ ಹೋಲಿಸಿದ ಮಾಜಿ ರಾಜ್ಯಪಾಲ

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಮಾಜಿ ಗವರ್ನರ್ ಅಜೀಜ್ ಖುರೇಷಿಯವರು, ದೆವ್ವ ಮತ್ತು ರಕ್ತ ಕುಡಿತುವ ರಾಕ್ಷಸನಿಗೆ ಹೋಲಿಸಿದ್ದಾರೆ.
ಉತ್ತರ ಪ್ರದೇಶದ ಪೊಲೀಸರು, ಮುಖ್ಯಮಂತ್ರಿ ಯೋಗಿ ಮತ್ತು ಅವರ ಸರ್ಕಾರದ ಮೇಲೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಖುರೇಷಿ ಮೇಲೆ ಕೇಸನ್ನು ದಾಖಲಿಸಿದ್ದಾರೆ.
ರಾಂಪುರದ ಶಾಸಕಿ ಹಾಗು ಖಾನ್ ಅವರ ಪತ್ನಿ ತಂಜೀಮ್ ಫಾತಿಮಾ ಅವರನ್ನು ಕಾಣಲು ಖುರೇಷಿ ಅವರು ಅಜಂ ಖಾನ್ ಮನೆಗೆ ತೆರಳಿದ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ದೆವ್ವ ಮತ್ತು ರಕ್ತ ಕುಡಿಯುವ ರಾಕ್ಷಸರಿಗೆ ಹೋಲಿಸಿದ್ದಾರೆ ಎಂದು ತಿಳಿದುಬಂದಿದೆ.
ಖುರೇಷ್ ಮೇಲೆ ಸ್ಥಳೀಯ ಬಿಜೆಪಿ ಕಾರ್ಯಕರ್ತ ಆಕಾಶ್ ಸಕ್ಸೆನಾ ಅವರು ದೂರು ನೀಡಿದ್ದಾರೆ. ದೂರಿನನ್ವಯ ಖುರೇಷಿ ಮೇಲೆ ಕೇಸ್ ದಾಖಲಿಸಲಾಗಿದೆ. ಕೇಸ್ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.