ಮರವಂತೆ ಬೀಚ್ ಗೆ ಕಾರು ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ
ಕುಂದಾಪುರ : ಶನಿವಾರ ತಡರಾತ್ರಿ ಮರವಂತೆ ಬೀಚ್ ಗೆ ಕಾರೊಂದು ಬಿದ್ದು ನಾಪತ್ತೆಯಾಗಿದ್ದ ರೋಷನ್ ಅವರ ಮೃತದೇಹ ತ್ರಾಸಿಯ ಹೊಸಪೇಟೆ ಸಮೀಪದ ಕಡಲ ಕಿನಾರೆಯಲ್ಲಿ ಸೋಮವಾರ ಪತ್ತೆಯಾಗಿದೆ.
ಶನಿವಾರ ತಡರಾತ್ರಿ ನಾಲ್ವರು ಸ್ವಿಫ್ಟ್ ಕಾರಿನಲ್ಲಿ ಕುಂದಾಪುರದಿಂದ ಬೈಂದೂರು ಕಡೆಗೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಮರವಂತೆ ಸಮುದ್ರಕ್ಕೆ ಬಿದ್ದಿದೆ ಈ ವೇಳೆ ಕಾರು ಚಾಲನೆ ಮಾಡುತ್ತಿದ್ದ ವಿರಾಜ್ ಆಚಾರ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದು ರೋಷನ್ ಸಮುದ್ರದ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು ಹಾಗೂ ಇಬ್ಬರು ಕಾರಿನಿಂದ ಜಿಗಿದು ಗಾಯಗೊಂಡಿದ್ದರು.
ನಾಪತ್ತೆಯಾಗಿದ್ದ ರೋಷನ್ ಗಾಗಿ ರಕ್ಷಣಾ ತಂಡ ಭಾನುವಾರದಿಂದ ಕಾರ್ಯಾಚರಣೆ ನಡೆಸಿದ್ದು, ಸೋಮವಾರ ಕಾರ್ಯಾಚರಣೆ ನಡೆಸಿ ತ್ರಾಸಿಯ ಹೊಸಪೇಟೆ ಬಳಿ ಮೃತದೇಹ ಪತ್ತೆಯಾಗಿದೆ.
ಗಂಗೊಳ್ಳಿ ಎಸ್ ಐ ವಿನಯ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಮುಳುಗು ತಜ್ಞರಾದ ಈಶ್ವರ್ ಮಲ್ಪೆ, ದಿನೇಶ್ ಖಾರ್ವಿ ಹಾಗೂ ಸ್ಥಳೀಯರು ಮೃತದೇಹ ಹುಡುಕಾಟಕ್ಕೆ ಸಹಕರಿಸಿದ್ದರು… ಗಂಗೊಳ್ಳಿ ಪೊಲೀಸರು ಸ್ಥಳದಲ್ಲಿದ್ದ ರು.