ಜನ ಸ್ವರಾಜ ಸಮಾವೇಶ

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದ ಪೂರ್ವಭಾವಿಯಾಗಿ ಜನ ಸ್ವರಾಜ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡ ಗ್ರಾಮೀಣ ಬಿಜೆಪಿ ಅಧ್ಯಕ್ಷ ಬಸವರಾಜ ಕುಂದಗೋಳಮಠ ಹೇಳಿದ್ದಾರೆ.. ಸುದ್ದಿಗೋಷ್ಠಿ ಮಾಡಿದ ಅವರು ಕರ್ನಾಟಕ ರಾಜ್ಯದಾದ್ಯಂತ ಪ್ರಮುಖರ ನಾಲ್ಕು ತಂಡಗಳಾಗಿ ಸಮಾವೇಶ ನಡೆಯುತ್ತಿದ್ದು, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನ.19 ರಂದು ಜನ ಸ್ವರಾಜ ಸಮಾವೇಶ ನಗರದ ಶ್ರೀನಿವಾಸ್ ಗಾರ್ಡನ್ ನಲ್ಲಿ ಆಯೋಜಿಸಲಾಗಿದೆ..ಈ ಸಮಾವೇಶದಲ್ಲಿ ಗದಗ, ಧಾರವಾಡ, ಹಾವೇರಿ ಜಿಲ್ಲೆಗಳ ಮತದಾರರು ಭಾಗಿಯಾಗಲಿದ್ದಾರೆ