ಕುಗ್ಗುತ್ತಿದ್ದ ಜನಪ್ರಿಯತೆಯನ್ನು ಮತ್ತೆ ಬಾಚಿಕೊಂಡ ಪ್ರಧಾನಿ ಮೋದಿ: ವಿಶ್ವದಲ್ಲೇ ನಂಬರ್ 1

ಕುಗ್ಗುತ್ತಿದ್ದ ಜನಪ್ರಿಯತೆಯನ್ನು ಮತ್ತೆ ಬಾಚಿಕೊಂಡ ಪ್ರಧಾನಿ ಮೋದಿ: ವಿಶ್ವದಲ್ಲೇ ನಂಬರ್ 1

ನವದೆಹಲಿ, ನ 8: ಕೊರೊನಾ ಎರಡನೇ ಅಲೆಯ ನಿರ್ವಹಣೆಯಲ್ಲಿನ ಆರಂಭಿಕ ಎಡವಟ್ಟು, ಉಚಿತ ಲಸಿಕೆ ವಿಚಾರದಲ್ಲಿನ ಗೊಂದಲ, ಬೆಲೆ ಏರಿಕೆ ಮುಂತಾದ ವಿಚಾರದಲ್ಲಿ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೆ ಟ್ರ್ಯಾಕಿಗೆ ಬಂದಿದ್ದಾರೆ.

ವಿಶ್ವದ ಜನಪ್ರಿಯ ನಾಯಕರು ಯಾರು ಎನ್ನುವ ಜಾಗತಿಕ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ಮೋದಿ ಮೊದಲನೇ ಸ್ಥಾನದಲ್ಲಿದ್ದಾರೆ. ನವೆಂಬರ್ ನಾಲ್ಕರಂದು ಸಮೀಕ್ಷೆ ನಡೆಸಿದ ಸಂಸ್ಥೆ ಫಲಿತಾಂಶವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.

ಅಮೆರಿಕಾದ ಡೇಟಾ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಸಮೀಕ್ಷೆ ನಡೆಸಿದ್ದು, ವಿಶ್ವದ ಹದಿಮೂರು ನಾಯಕರ ಅಪ್ರೂವಲ್ ರೇಟಿಂಗ್ ಅನ್ನು ಇದರಲ್ಲಿ ನೀಡಿದೆ. ಪ್ರಧಾನಿ ಮೋದಿಯವರು ಹಿಂದೆಯೂ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದರೂ, ಅವರ ಜನಪ್ರಿಯತೆ ಕುಗ್ಗುತ್ತಿತ್ತು.

ಭಾರತ, ಅಮೆರಿಕಾ, ಯುಕೆ, ಫ್ರಾನ್ಸ್, ಬ್ರೆಜಿಲ್, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಇಟೆಲಿ, ಜಪಾನ್, ಮೆಕ್ಸಿಕೋ, ದಕ್ಷಿಣ ಆಫ್ರಿಕಾ, ಸ್ಪೇನ್ ದೇಶದ ನಾಯಕರಲ್ಲಿ ಯಾರು ಜನಪ್ರಿಯರು ಎನ್ನುವ ಸಮೀಕ್ಷೆಯನ್ನು ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ನಡೆಸುತ್ತದೆ. ಈ ಪಟ್ಟಿಯಲ್ಲಿ ಬಲಾಢ್ಯ ಚೀನಾ ಇಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ವಿಶ್ವದ ಹದಿಮೂರು ನಾಯಕರ ಪಾಯಿಂಟ್ಸ್ ಗಳು ಹೀಗಿದೆ:


ಕುಗ್ಗುತ್ತಿದ್ದ ಜನಪ್ರಿಯತೆಯನ್ನು ಮತ್ತೆ ಎಳೆದುಕೊಂಡ ಮೋದಿ

ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆಯ 2019ರ ಸಮೀಕ್ಷೆಯಿಂದಲೂ ಪ್ರಧಾನಿ ಮೋದಿ ಮೊದಲ ಸ್ಥಾನದಲ್ಲಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಅವರ ಜನಪ್ರಿಯತೆ ಹಲವು ಕಾರಣಗಳಿಂದ ಕುಗ್ಗುತ್ತಿತ್ತು. ಅದರಲ್ಲಿ, ಕೊರೊನಾ ನಿರ್ವಹಣೆ, ಕೃಷಿ ನೀತಿ, ಬೆಲೆ ಏರಿಕೆ ಮುಂತಾದವು ಪ್ರಮುಖ ಕಾರಣವಾಗಿದ್ದವು. ಏಳು ದಿನಗಳ ಸರಾಸರಿ ಪಾಯಿಂಟ್ ಮೂಲಕ, ಸಂಸ್ಥೆಯ ಸಮೀಕ್ಷೆಯಲ್ಲಿ ಶೇ. 70 ಪಾಯಿಂಟ್ ಮೂಲಕ ಮೋದಿ ಪ್ರಥಮ ಸ್ಥಾನದಲ್ಲಿ ರಾರಾಜಿಸುತ್ತಿದ್ದಾರೆ. ಪ್ರಮುಖವಾಗಿ, ಯುವ ಸಮುದಾಯ ಮೋದಿಯವರ ಬೆನ್ನಿಗೆ ನಿಂತಿರುವುದು ಸಮೀಕ್ಷೆಯ ಪ್ರಮುಖಾಂಶಗಳಲ್ಲೊಂದು.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಭಾರೀ ಮೆಚ್ಚುಗೆ

ದೇಶದ ಎಲ್ಲಾ ಪ್ರಮುಖ ಪಕ್ಷಗಳಿಗೆ ನಿರ್ಣಾಯಕವಾಗಿರುವ ಪಂಚ ರಾಜ್ಯಗಳ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಸ್ವಾಭಾವಿಕವಾಗಿ ಈ ಸಮೀಕ್ಷೆಯನ್ನು ಊರೆಲ್ಲಾ ಹಂಚುತ್ತಿದೆ. "ಇದು ಸಮರ್ಥ ನಾಯಕ ಹೇಗೆ ದೇಶವನ್ನು ಮುನ್ನಡೆಸಬಲ್ಲ ಎನ್ನುವುದಕ್ಕೆ ಬಂದಿರುವ ಒಂದು ಉದಾಹರಣೆ. ಕೋವಿಡ್ ಸೇರಿದಂತೆ ಹಲವು ಗಂಭೀರ ವಿಚಾರಗಳನ್ನು ಮೋದಿ ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ. ವಿಶ್ವದ ಒಪ್ಪಿಕೊಳ್ಳಲಾಗದ ನಾಯಕರ ಪೈಕಿ ಕಡೆಯ ಸ್ಥಾನದಲ್ಲಿದ್ದಾರೆ. ಇದು ನಮ್ಮ ಸರಕಾರ ಜನಪರ ಹಾದಿಯಲ್ಲಿದೆ ಎನ್ನುವುದಕ್ಕೆ ಸಾಕ್ಷಿ"ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಯಾರು ಮೋದಿ ನಂತರದ ಸ್ಥಾನದಲ್ಲಿದ್ದಾರೆ, ಮುಂದಿನ ಸ್ಲೈಡ್ ನೋಡಿ..

ಮೋದಿ ನಂತರದ ಸ್ಥಾನದಲ್ಲಿ ಮೆಕ್ಸಿಕೋ ಅಧ್ಯಕ್ಷರಾದ ಲೋಪೆಜ್ ಒಬ್ರೇಡರ್

2. ಲೋಪೆಜ್ ಒಬ್ರೇಡರ್ - ಅಧ್ಯಕ್ಷರು (ಮೆಕ್ಸಿಕೋ) - ಶೇ. 66
3. ಮರಿಯೋ ಡ್ರಾಗಿ - ಪ್ರಧಾನಿ (ಇಟೆಲಿ) - ಶೇ. 58
4. ಆಂಜೆಲೋ ಮಾರ್ಕೆಲ್ - ಚಾನ್ಸಿಲರ್ (ಜರ್ಮನಿ) - ಶೇ. 54
5. ಸ್ಕಾಟ್ ಮಾರಿಶನ್ - ಪ್ರಧಾನಿ (ಆಸ್ಟ್ರೇಲಿಯಾ) - ಶೇ. 47
6. ಜಸ್ಟಿನ್ ಟ್ರುಡೋ - ಪ್ರಧಾನಿ (ಕೆನಡಾ) - ಶೇ. 45
7. ಜೋ ಬೈಡೆನ್ - ಅಧ್ಯಕ್ಷರು (ಅಮೆರಿಕಾ) - ಶೇ. 44

(ಚಿತ್ರದಲ್ಲಿ: ಲೋಪೆಜ್ ಒಬ್ರೇಡರ್ - ಮೆಕ್ಸಿಕೋ, ಅಧ್ಯಕ್ಷರು

ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮಾರ್ಕನ್ ಹನ್ನೆರಡನೇ ಸ್ಥಾನದಲ್ಲಿ

8. ಫುಮಿಯೋ ಕಿಸಿದ - ಪ್ರಧಾನಿ (ಜಪಾನ್) - ಶೇ. 42
9. ಮೂನ್ ಜೇ-ಇನ್ - ಅಧ್ಯಕ್ಷರು (ದಕ್ಷಿಣ ಆಫ್ರಿಕಾ) - ಶೇ. 41
10. ಬೊರಿಸ್ ಜಾನ್ಸನ್ - ಪ್ರಧಾನಿ (ಯುಕೆ) - ಶೇ. 40
11. ಪೆಡ್ರೋ ಸಾಂಚೆಜ್ - ಪ್ರಧಾನಿ (ಸ್ಪೇನ್) - ಶೇ. 37
12. ಇಮ್ಯಾನ್ಯುಯಲ್ ಮಾರ್ಕನ್ - ಅಧ್ಯಕ್ಷರು (ಫ್ರಾನ್ಸ್) - ಶೇ. 36
13. ಜೈರ್ ಬೊಲ್ಸೊನರೊ - ಅಧ್ಯಕ್ಷರು (ಬ್ರೆಜಿಲ್) - ಶೇ. 35