ಬ್ರಿಟನ್-ಭಾರತ ಬಾಂಧವ್ಯ ಹೆಚ್ಚು ಬಲಶಾಲಿ: ಬೋರಿಸ್ ಜಾನ್ಸನ್

ನವದೆಹಲಿ: ಬ್ರಿಟನ್ ಪ್ರಧಾನಿ ಭಾರತೀಯ ಮೂಲದ ರಿಷಿ ಸುನಕ್ ಅವರ ನೇತೃತ್ವದಲ್ಲಿ ಬ್ರಿಟನ್ ಮತ್ತು ಭಾರತ ನಡುವಿನ ಬಾಂಧವ್ಯ ಹೆಚ್ಚು ಬಲಶಾಲಿಯಾಗಲಿದೆ.
ಈ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಉಭಯ ದೇಶಗಳಿಗೂ ಹಿಂದೆಂದಿಗಿಂತಲೂ ಹೆಚ್ಚು ಪರಸ್ಪರರ ಅಗತ್ಯವಿದೆ ಎಂದು ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದರು.
ನವದೆಹಲಿಯಲ್ಲಿ ನಡೆದ ಸಮಾವೇಶವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಮುಕ್ತ ವ್ಯಾಪಾರ ಒಪ್ಪಂದವನ್ನು ಭಾರತ ಮತ್ತು ಬ್ರಿಟನ್ ಶೀಘ್ರ ಅಂತಿಮಗೊಳಿಸಬೇಕು. ಇದಕ್ಕಾಗಿ ಮುಂದಿನ ದೀಪಾವಳಿ ವರೆಗೂ ಕಾಯುವ ಅಗತ್ಯವಿಲ್ಲ,’ ಎಂದು ಪ್ರತಿಪಾದಿಸಿದರು.
ಇದೇ ವೇಳೆ ಕಳೆದ ಏಪ್ರಿಲ್‌ನಲ್ಲಿ ತಮ್ಮ ಭಾರತ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಮಾತುಕತೆಯನ್ನು ಸ್ಮರಿಸಿದರು.