ವಿವೇಕ ಶಾಲಾ ಯೋಜನೆಯಡಿ, ಧಾರವಾಡ ಜಿಲ್ಲೆಗೆ 50 ಶಾಲಾ ಕೊಠಡಿ ಮಂಜೂರು

ವಿವೇಕ ಶಾಲಾ ಯೋಜನೆಯಡಿ, ಧಾರವಾಡ ಜಿಲ್ಲೆಗೆ 50 ಶಾಲಾ ಕೊಠಡಿ ಮಂಜೂರು

ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಯಿಂದ ಶಿಥಿಲಗೊಂಡಿದ್ದ ಹಾಗೂ ದುರಸ್ತಿ ಹಂತದಲ್ಲಿದ್ದ ಶಾಲೆಗಳ ಕೊಠಡಿಗಳ ಅವಶ್ಯಕತೆಯನ್ನು ನೀಗಿಸಲು, ಸಾಂಸ್ಥೀಯ ಸಾಮಾಜಿಕ ಜವಾಬ್ದಾರಿ - ಸಿ.ಎಸ್.ಆರ್.ಯೋಜನೆಯಡಿ, ರಾಜ್ಯ ಸರ್ಕಾರವು 50 ಹೆಚ್ಚುವರಿ ಶಾಲಾ ಕೊಠಡಿಗಳನ್ನು ಮಂಜೂರು ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು,
ಸರ್ಕಾರದ ವಿವೇಕ ಶಾಲೆ ಯೋಜನೆಯಡಿ, ಈ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಪ್ರಾಥಮಿಕ ಶಾಲೆಯ ಒಂದು ಕೊಠಡಿಗೆ 13.90 ಲಕ್ಷ ರೂಪಾಯಿ ಹಾಗೂ ಪ್ರೌಢಶಾಲೆಯ ಒಂದು ಕೊಠಡಿಗೆ 16.40 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಇದಕ್ಕೆ ಬೇಕಾಗಿರುವ ಅಂದಾಜು 6.04 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಧಾರವಾಡ ಲೋಕಸಭಾ ವ್ಯಾಪ್ತಿಯ ನಾಲ್ಕು ಪ್ರೌಢಶಾಲೆಗಳು ಹಾಗೂ 27 ಪ್ರಾಥಮಿಕ ಶಾಲೆಗಳಲ್ಲಿ ಈ ಕೊಠಡಿಗಳು ನಿರ್ಮಾಣವಾಗಲಿದ್ದು, ಬರುವ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಬಳಕೆಗೆ ಇವು ಮುಕ್ತವಾಗಲಿವೆ ಎಂದು ತಿಳಿಸಿದ್ದಾರೆ.2019 ರಿಂದ ಕೋಲ್ ಇಂಡಿಯಾ ಲಿಮಿಟೆಡ್ ಕಂಪನಿಯ ಸಿ.ಎಸ್.ಆರ್. ಅಡಿ, 120 ಶಾಲೆಗಳನ್ನು ಕಟ್ಟಿಸಲಾಗಿದ್ದು, ಇನ್ನಿತರ ಕಂಪನಿಗಳ ಸಿ.ಎಸ್.ಆರ್. ಅಡಿಯಲ್ಲಿ 300 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ 150 ಕೊಠಡಿಗಳ ನಿರ್ಮಾಣಕ್ಕೆ ಒಪ್ಪಿಗೆ ದೊರೆತಿದ್ದು ಇನ್ನೂ 150 ಕೊಠಡಿಗಳು ಪ್ರಸ್ತಾವನೆ ಹಂತದಲ್ಲಿವೆ ಎಂದು ಪ್ರಲ್ಹಾದ್ ಜೋಶಿ, ಮಾಹಿತಿ ನೀಡಿದ್ದಾ