ಭವಿಷ್ಯದಲ್ಲಿ ದಸರಾ ಅಂಬಾರಿ ಹೊರಬೇಕಿದ್ದ 'ಗೋಪಾಲಸ್ವಾಮಿ' ಆನೆ ಸಾವು : ಸಿಎಂ ಬೊಮ್ಮಾಯಿ ಸಂತಾಪ

ಮೈಸೂರು : ಇತ್ತೀಚೆಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ಮೈಸೂರು ದಸರಾ ಆನೆ ಗೋಪಾಲಸ್ವಾಮಿ ಮೃತಪಟ್ಟಿದೆ.
ಗೋಪಾಲಸ್ವಾಮಿ ಕಾಡಾನೆ ಜತೆಗಿನ ಕಾದಾಟದಲ್ಲಿ ತೀವ್ರ ಗಾಯಗೊಂಡು ದಾರುಣ ಅಂತ್ಯ ಕಂಡಿದೆ. ಹುಣಸೂರಿನ ಮತ್ತಿಗೋಡು ಆನೆ ಶಿಬಿರದಲ್ಲಿದ್ದ ಗೋಪಾಲ ಸ್ವಾಮಿ ಹಾಗೂ ಇಗ್ಗೆ ಸೆರೆ ಹಿಡಿದಿದ್ದ ಅಯ್ಯಪ್ಪ ಎಂಬ ಆನೆ ಜತೆಗಿನ ಕಾದಾಟದಲ್ಲಿ ನಿಧನವಾಗಿದೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದ ಆನೆ ಗೋಪಾಲಸ್ವಾಮಿ ಹುಣಸೂರಿನ ಮತ್ತಿಗೋಡು ಶಿಬಿರದಲ್ಲಿ ಕಾಡಾನೆ ಜೊತೆ ಕಾದಾಡಿ ಸಾವನ್ನಪ್ಪಿರುವ ಸುದ್ದಿ ತಿಳಿದು ಬೇಸರವಾಯಿತು. ಗಜರಾಜನ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಓಂ ಶಾಂತಿಃ ಎಂದು ಟ್ವೀಟ್ ಮಾಡಿದ್ದಾರೆ.