ಸೈನಿಕರೊಂದಿಗೆ ಸಮಯ ಕಳೆದ ವಿಜಯ್​​ ದೇವರಕೊಂಡ; ಮುಂದಿನ ಸಿನಿಮಾದ ಮುನ್ಸೂಚನೆ ಎಂದ ಅಭಿಮಾನಿಗಳು

ಸೈನಿಕರೊಂದಿಗೆ ಸಮಯ ಕಳೆದ ವಿಜಯ್​​ ದೇವರಕೊಂಡ; ಮುಂದಿನ ಸಿನಿಮಾದ ಮುನ್ಸೂಚನೆ ಎಂದ ಅಭಿಮಾನಿಗಳು

ವದೆಹಲಿ: ಅರ್ಜುನ್​​​ ರೆಡ್ಡಿ, ಗೀತಗೋವಿದಂನಂತಹ ಹಿಟ್​​ ಸಿನಿಮಾಗಳನ್ನು ನೀಡಿದ ವಿಜಯ್​​ ದೇವರಕೊಂಡ ದಕ್ಷಿಣ ಭಾರತದ ಬಹುಬೇಡಿಕೆಯ ನಟ. ವಿಜಯ್​​ ಅತ್ಯಂತ ಕಡಿಮೆ ಸಮಯದಲ್ಲೇ ತನ್ನ ಅತ್ಯದ್ಭುತ ನಟನೆ ಹಾಗೂ ತನ್ನ ಲುಕ್​ನಿಂದ ಭಾರತೀಯ ಚಲನಚಿತ್ರರಂಗದಲ್ಲಿ ತನ್ನದೇ ಆದ ವಿಶೇಷ ಸ್ಥಾನವನ್ನು ಹೊಂದಿದ್ದಾರೆ.

ವಿಜಯ್​ ದೇವರಕೊಂಡ ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡ ವಿಡಿಯೋ ನೋಡಿದ ಅಭಿಮಾನಿಗಳು, ವಿಜಯ್​​ನ ಮುಂದಿನ ಸಿನಿಮಾ ಯಾವುದಾಗಿರಬಹುದೆಂದು ಕುತೂಹಲರಾಗಿದ್ದಾರೆ.

ಇತ್ತೀಚೆಗೆ ವಿಜಯ್​​ ತಮ್ಮ ಸೋಶಿಯಲ್​​ ಮೀಡಿಯಾದಲ್ಲಿ ಭಾರತೀಯ ಸೈನಿಕರೊಂದಿಗಿನ ವಿಡಿಯೋವೊಂದನ್ನು ಶೇರ್​​ ಮಾಡಿದ್ದರು. ಈ ವಿಡಿಯೋದಲ್ಲಿ ವಿಜಯ್​​ ಒಂದರ ಹಿಂದೆ ಮತ್ತೊಂದರಂತೆ ನಿರಂತರವಾಗಿ ಶೂಟ್​​​ ಮಾಡುವ ದೃಶ್ಯವಿದೆ. ಇದಲ್ಲದೇ ನಟನ ಸಹಾಯಕ್ಕೆ ಸೈನಿಕರು ನೆರವಾಗಿದ್ದಾರೆ. ಇದಕ್ಕೂ ಮುಂಚೆ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ನಟ ಫೋಟೋವೊಂದನ್ನು ಹಾಕಿದ್ದರು. ಇದೀಗ ವಿಡಿಯೋ ಹಾಕಿ ಅದಕ್ಕೆ 'ಈ ದೀಪಾವಳಿ, ಗನ್ಸ್​​, ಗನ್ಸ್​​, ಗನ್ಸ್​​. ರಾತ್ರಿ ಗಸ್ತು, ಆಟಗಳು, ಹಾಡುಗಳು, ಡಾನ್ಸ್​​, ಬೋಟ್​​ ರೇಸ್​​, ಬದುಕುಳಿಯುವ ಕಸರತ್ತುಗಳು. ಉತ್ತಮ ನೆನಪುಗಳು. #ಜೈಹಿಂದ್​​ #ಜೈಜವಾನ್'​​ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಬಾಲಿವುಡ್​​ ನಟಿ ಅನನ್ಯಾ ಪಾಂಡೆ ಜತೆ ವಿಜಯ್​​ ನಟನೆಯ ಲೈಗರ್​​ ಸಿನಿಮಾ ದೊಡ್ಡ ಮಟ್ಟದ ಪ್ರಚಾರ ಮಾಡಿದ್ದರೂ, ಅಂದುಕೊಂಡ ರೀತಿಯಲ್ಲಿ ಯಶಸ್ಸು ಕಾಣದೇ ನೆಲಕಚ್ಚಿತ್ತು. ಅದರ ನಂತರ ವಿಜಯ್​​​ ಕೆಲವು ದಿನಗಳ ಕಾಲ ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಸದ್ಯ ಈ ನಟನ ಕೈಯಲ್ಲಿ ಇನ್ನೂ ಹಲವು ಪ್ರಾಜೆಕ್ಟ್​​ಗಳಿದ್ದು, ನಟಿ ಸಮಂತಾ ಜತೆ ರೋಮ್ಯಾಂಟಿಕ್​​ ಸಿನಿಮಾ ಖುಷಿ ಹಾಗೂ ಪೂಜಾ ಹೆಗ್ಡೆ ಜತೆಗಿನ ಆಕ್ಷನ್​ ಸಿನಿಮಾ ಜನಗಣಮನ ಲಿಸ್ಟ್​​ನಲ್ಲಿದೆ.