ಗುಜರಾತ್ ಹೈಕೋರ್ಟ ಮುಖ್ಯ ನಾಯಮೂರ್ತಿಗಳಿಗೆ ಸನ್ಮಾನ
ಗುಜರಾತ್ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಅರವಿಂದ ಕುಮಾರ್ ಅವರಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ ವತಿಯಿಂದ ಇಂದು ಸನ್ಮಾನಿಸಲಾಯಿತು. ಅಹ್ಮದಾಬಾದನ ರಾಜಭವನದಲ್ಲಿ ಈ ಸನ್ಮಾನ ನಡೆಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಶ್ರೀನಿವಾಸ್ ಬಾಬು ಎಲ್, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಆನಂದಕುಮಾರ ಎ ಮಗದುಮ್ಮ, ಹರೀಶ್ ಎಸ್, ಕೆ ಗೌತಮಚಂದ ಎಸ್ ಎಪ್ ಹಾಗೂ ವಿನಯ ಮಾಂಗಳೇಕರ ಉಪಸ್ಥಿತರಿದ್ದರು.