ಬೆಂಗಳೂರಲ್ಲಿ CBSE ಸಿಲೆಬಸ್‌ ಎಂದು ಸುಳ್ಳು ಹೇಳಿದ ಖಾಸಗಿ ಶಾಲೆ : ಆಡಳಿತ ಮಂಡಳಿಗೆ ಪೋಷಕರಿಂದ ತರಾಟೆ

ಬೆಂಗಳೂರಲ್ಲಿ CBSE ಸಿಲೆಬಸ್‌ ಎಂದು ಸುಳ್ಳು ಹೇಳಿದ ಖಾಸಗಿ ಶಾಲೆ : ಆಡಳಿತ ಮಂಡಳಿಗೆ ಪೋಷಕರಿಂದ ತರಾಟೆ

ಬೆಂಗಳೂರು : ನಾಗರಬಾವಿಯಲ್ಲಿರುವ ಆರ್ಕಿಡ್‌ ಇಂಟರ್‌ ನ್ಯಾಷನಲ್‌ ಶಾಲೆಯೊಂದು ಸಿಬಿಎಸ್‌ಇ ಬೋರ್ಡ್‌ ಸಿಲೆಬಸ್‌ ಹೇಳಿಕೊಡುವುದಾಗಿ ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಈ ಬೆನ್ನಲ್ಲೆ ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆಂದು ಪೋಷಕರು ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದಿದ್ದಾರೆ. ಈ ಶಾಲೆಯಲ್ಲಿ ಸಿಬಿಎಸ್‌ಇ ಬೋರ್ಡ್‌ ಸಿಲೆಬಸ್‌ ಮಾನ್ಯತೆಯನ್ನೇ ಪಡೆಯದೇ ನಡೆಸುತ್ತಿದೆ .

ಶಾಲೆಯೂ ಪೋಷಕರಲ್ಲಿಸಿಬಿಎಸ್‌ಇ ಬೋರ್ಡ್‌ ಸಿಲೆಬಸ್‌ ಪಾಠ ಮಾಡಲಾಗುತ್ತದೆ ಎಂದುಕೊಂಡು ಪೋಷಕರಿಗೆ ಲಕ್ಷಾಂತರ ಹಣ ವಂಚನೆ ಮಾಡಿದೆ.

ಈ ದೋಖಾ ಮಕ್ಕಳು ಪಬ್ಲಿಕ್‌ ಎಕ್ಸಾಂ ಪಡೆಯಲು ಮುಂದಾದಾಗ ಶಾಲೆ ನಡೆಸಿದ ಮೋಸ ವಿಚಾರ ಬೆಳಕಿಗೆ ಬಂದಿದೆ.

ಪೋಷಕರು ಧನಿ ಎತ್ತಿದ ಬಳಿಕ ಶಾಲಾ ಆಡಳಿತ ಮಂಡಳಿ ಸಿಬಿಎಸ್‌ಇ ಬೋರ್ಡ್‌ ಮಾನ್ಯತೆಯನ್ನು ಪಡೆದಿಲ್ಲ ಎಂಬ ಸತ್ಯವನ್ನು ಒಪ್ಪಿಕೊಂಡಿದೆ. ಇದ್ರಿಂದ ಶಾಲೆಯಲ್ಲಿ ಓದಿದ ಅದೇಷ್ಟು ಮಕ್ಕಳಿಗೆ ಭಾರೀ ಸಮಸ್ಯೆ ಎದುರಾಗಿದೆ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ