ಪಾಕಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ: ಬ್ರೇಕ್ ಫೇಲ್ ಆಗಿ ಬಸ್‌ಗೆ ಡಿಕ್ಕಿ ಹೊಡೆದ ಟ್ರಕ್, 17 ಮಂದಿ ಸಾವು

ಪಾಕಿಸ್ತಾನ: ಪಾಕಿಸ್ತಾನದಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭೀಕರ ಅಪಗಾತ ಸಂಭವಿಸಿದ್ದು, ಸುಮಾರು 17 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಗುರುವಾರ ಪೇಶಾವರದಿಂದ ನೈಋತ್ಯಕ್ಕೆ 40 ಕಿಮೀ ದೂರದಲ್ಲಿರುವ ಸಿಂಧೂ ಹೆದ್ದಾರಿಯ ಕೊಹಾಟ್ ಸುರಂಗದ ಬಳಿ ಈ ಘಟನೆ ನಡೆದಿದೆ.
ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.