ರಾಜ್ಯಕ್ಕೆ ಇನ್ಮುಂದೆ ಮೋದಿ, ಅಮಿತ್‌ ಶಾ , ಜೆ.ಪಿ ನಡ್ಡಾ ಬರ್ತಾರೆ: 140 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ: ಬಿಎಸ್‌ ವೈ

ರಾಜ್ಯಕ್ಕೆ ಇನ್ಮುಂದೆ ಮೋದಿ, ಅಮಿತ್‌ ಶಾ , ಜೆ.ಪಿ ನಡ್ಡಾ ಬರ್ತಾರೆ: 140 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ: ಬಿಎಸ್‌ ವೈ

ಶಿವಮೊಗ್ಗ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಮೂರು ಪಕ್ಷಗಳು ಪ್ರಚಾರದ ಅಖಾಡಕ್ಕೆ ಇಳಿದಿವೆ.ರಾಜ್ಯಕ್ಕೆ ಇನ್ಮುಂದೆ ಮೋದಿ, ಅಮಿತ್‌ ಶಾ , ಜೆ.ಪಿ ನಡ್ಡಾ ಬರ್ತಾರೆ ಎಂದು ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿ, ಅಮಿತ್‌ ಶಾ , ಜೆ.ಪಿ ನಡ್ಡಾ ಅವರು ಬಂದು ಹೋಗ್ತಾ ಇರುತ್ತಾರೆ. 140 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂಬುದು ನಮ್ಮ ಸಂಕಲ್ಪವಾಗಿದೆ. ಆ ಭರವಸೆ ನಾವೇಲ್ಲರೂ ಒಟ್ಟಾಗಿ ಪ್ರಧಾನಿ ಮೋದಿಗೆ ಕೊಟ್ಟಿದ್ದೇವೆ. ಅದನ್ನು ಕಾರ್ಯರೂಪಕ್ಕೆ ತರಲು ಒಟ್ಟಾಗಿ ಕೆಲಸ ಆರಂಭಿಸಿದ್ದೇವೆ. ನಿಶ್ವಿತವಾಗಿ ಗುರಿ ತಲುಪುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.