ದೇಶಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ

ಕುಂದಗೋಳ ಸಮೀಪದ ಗುಡೇನಕಟ್ಟಿ ಗ್ರಾಮದಲ್ಲಿ ವಿಶ್ವಕರ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸಕ್ರಪ್ಪ ಕಮ್ಮಾರ್ ಮಾತನಾಡಿ, ರೈತರು ಪ್ರತಿನಿತ್ಯ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸುವ ಹಾಗೂ ಬಂಗಾರ ಆಭರಣ, ಮೂರ್ತಿಗಳನ್ನು ಕೆತ್ತನೆ ಮಾಡುವಲ್ಲಿ ಅವರ ಕೊಡುಗೆ ವಿಶ್ವಕ್ಕೆ ಅಪಾರ ಎಂದು ಹೇಳಿದರು. ಮಾನಪ್ಪ ಕುಮಾರ್, ಪಾಂಡುರಂಗ ಬಡಿಗೇರ್, ಮಾನಪ್ಪ ಬಡಿಗೇರ, ಈರಪ್ಪ ಅರ್ಕಸಾಲಿ, ಈರಪ್ಪ ಬಡಿಗೇರ್, ಗುರುನಾಥ್ ಕಮ್ಮಾರ್, ಉಮೇಶ್ ಕಮ್ಮಾರ್, ವಿರುಪಾಕ್ಷ ಬಡಿಗೇರ್ ಹಾಗೂ ಗ್ರಾಮದ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು