ಯಾರು ಎಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದು : ಸಿದ್ದು ಪರ ಸಚಿವ ಎಂಟಿಬಿ ನಾಗರಾಜ್ ಬ್ಯಾಟಿಂಗ್

ಯಾರು ಎಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದು : ಸಿದ್ದು ಪರ ಸಚಿವ ಎಂಟಿಬಿ ನಾಗರಾಜ್ ಬ್ಯಾಟಿಂಗ್

ಕೋಲಾರ : ಯಾರು ಎಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ಕೋಲಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಯಾರು ಎಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದು, ಅದು ವರಿಷ್ಟರ ತೀರ್ಮಾನವಾಗಿದೆ ಎಂದರು.

ಈ ಬಾರಿ ಬಿಜೆಪಿ 123 ಸ್ಥಾನ ಗೆಲ್ಲಲಿದೆ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ . ಮಾಲೂರು ಅಭ್ಯರ್ಥಿ ವಿಚಾರ ಹೈಕಮಾಂಡ್ ಗ ಬಿಟ್ಟಿದ್ದು ಎಂದು ಸಚಿವರು ಹೇಳಿದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈಗಾಗಲೇ ಕೋಲಾರಕ್ಕೆ ಹೋಗಿ ಬಂದಿರುವ ಸಿದ್ದರಾಮಯ್ಯ ಇದೀಗ ಮತ್ತೆ ಕೋಲಾರಕ್ಕೆ ಬಂದಿದ್ದಾರೆ. ಈ ವಿಚಾರ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಇದೇ ವೇಳೆ ಕೋಲಾರದಲ್ಲಿ ಅಧಿಕೃತವಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.