ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್‌ ಗೆ ಬರಲು ಸಜ್ಜಾಗಿದ್ದಾರೆ: ಹಾವೇರಿ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದ ಡಿಕೆಶಿ ಮಾತು

ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್‌ ಗೆ ಬರಲು ಸಜ್ಜಾಗಿದ್ದಾರೆ: ಹಾವೇರಿ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದ ಡಿಕೆಶಿ ಮಾತು

ಹಾವೇರಿ: ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್‌ ಗೆ ಬರಲು ಸಜ್ಜಾಗಿದ್ದಾರೆ ಎಂದು ಡಿ.ಕೆ ಶಿವಕುಮಾರ್‌ ಮಾತಿಗೆ ಹಾವೇರಿ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ.

ಜಿಲ್ಲೆಯ ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್‌ ಗೆ ಬರಲು ಸಜ್ಜಾಗಿದ್ದಾರೆ.

ಸ್ಥಳವಿಲ್ಲ ಅಂತಾ ನಾನೇ ಇಬ್ಬರನ್ನು ಪಕ್ಷಕ್ಕೆ ಕರೆದುಕೊಂಡಿಲ್ಲ ಎಂದು ಹೇಳಿದ್ದಾರೆ.ತೆಲಂಗಾಣ ಸಿಎಂ ಹಣದ ಆಮಿಷ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ನನಗೆ ಇದರ ಬಗ್ಗೆ ಮಾಹಿತಿ ಇಲ್ಲ. ನಾನು ನೋಡಿ ಪ್ರತಿಕ್ರಿಯೆ ಕೊಡುತ್ತೇನೆ. ಅವರ ಪಕ್ಷದವರು ಏನಾದರೂ ಸ್ಟ್ರಾಟಜಿ ಮಾಡಿಕೊಳ್ಳಲಿ. ಕರ್ನಾಟಕ ರಾಜ್ಯದಲ್ಲಿ ಸರ್ಕಾರ ವಿಫಲವಾಗಿದೆ. ಮೊದಲು ಸಿಎಂ ಬೊಮ್ಮಾಯಿ‌ ನೇತೃತ್ವದಲ್ಲಿ ಚುನಾವಣೆ ಅಂದ್ರು ಅಮಿತ್ ಶಾ. ಈಗ ಮೋದಿ ನೇತೃತ್ವದಲ್ಲಿ ಚುನಾವಣೆ ಅಂತಿದ್ದಾರೆ. ಸರ್ಕಾರ ಮೂರು ವರ್ಷ ಇತ್ತು. ಮೊದಲೇ ಯೋಜನೆ ಮಾಡಬಹುದಿತ್ತು. ನಾವು ಘೋಷಣೆ ಮಾಡಿದ ಮೇಲೆ ನಾವು ಕೊಡ್ತೆವೆ ಅಂತಿದ್ದಾರೆ. ಭ್ರಷ್ಟಾಚಾರ ಹೊರಗೆ ಬರ್ತಾ ಇದೆ. ಕೊರೊನಾ ಭ್ರಷ್ಟಾಚಾರ, ಪಿಎಸ್‌ಐ, ಗುತ್ತಿಗೆದಾರರ ಆರೋಪ ಬಂದಿದೆ ಎಂದು ಬಿಜೆಪಿ ವಿರುದ್ಧ ಕುಟುಕಿದ್ದಾರೆ.