ದೆಹಲಿಯಲ್ಲಿ ಆಘಾಯಕಾರಿ ಘಟನೆ : ಪರೀಕ್ಷೆ ವೇಳೆ ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿ!

ದೆಹಲಿಯಲ್ಲಿ ಆಘಾಯಕಾರಿ ಘಟನೆ : ಪರೀಕ್ಷೆ ವೇಳೆ ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿ!

ವದೆಹಲಿ : ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿ ದದೆಹಲಿ ಒಂದಲ್ಲೊಂದು ಕಾರಣಗಳಿಂದ ಸುದ್ದಿಯಾಗುತ್ತಿದೆ. ಹಿಟ್& ರನ್ ಪ್ರಕರಣಗಳು, ಲೈಂಗಿಕ ಕೇಸ್ ಗಳು ಹೀಗೆ ವದರಿಯಾಗುತ್ತಿದೆ. ಅಂತಹದ್ದೆ ಘಟನೆಯೊಂದು ಬೆಳಕಿಗೆ ಬಂದಿದೆ.

ಇಂದು ಪರೀಕ್ಷೆ ವೇಳೆ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕನಿಗೆ ವಿದ್ಯಾರ್ಥಿಯೊಬ್ಬ ಚಾಕುವಿನಿಂದ ಒಂದಕ್ಕಿಂತ ಹಲವು ಇರಿದಿರುವ ಘಟನೆ ದೆಹಲಿಯ ಇಂದರ್‌ಪುರಿ ಪ್ರದೇಶದಲ್ಲಿ ನಡೆದಿದೆ.

ಹಲ್ಲೆಗೊಳಗಾದ ಶಿಕ್ಷಕನ್ನು ಭೂದೇವ್ ಎಂದು ಗುರುತಿಲಸಾಗಿದೆ. ಇವರು ಪ್ರಾಯೋಗಿಕ ಪರೀಕ್ಷೆಯನ್ನು ಪರೀಕ್ಷಿಸಲು ಶಾಲೆಗೆ ಭೇಟಿ ನೀಡಿದ್ದರು. ಈ ವೇಳೆ ಬಾಲಕ ಶಿಕ್ಷಕ ಮೇಲೆ ಹಲವು ಬಾರಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಸದ್ಯ ಗಾಯಗೊಂಡ ಶಿಕ್ಷಕ ಬಿಎಲ್‌ಕೆ ಕಪೂರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಲಕ ಯಾವ ಕಾರಣಕ್ಕಾಗಿ ಹಲ್ಲೆ ಮಾಡಿದ್ದಾನೆ ಎಂಬುದರ ಬಗ್ಗೆ ಇನ್ನೂ ತಿಳಿದಿಲ್ಲ. ಪ್ರಕರಣ ಸಂಬಂಧ 12ನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆಯಲ್ಲಿ ಇನ್ನೂ ಇಬ್ಬರು ವಿದ್ಯಾರ್ಥಿಗಳು ಭಾಗಿಯಾಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.