ರಾಜ್ಯದಲ್ಲಿ ಮತ್ತೆ 'ನೈಟ್ ಕರ್ಪ್ಯೂ' ಜಾರಿ.?

ರಾಜ್ಯದಲ್ಲಿ ಮತ್ತೆ 'ನೈಟ್ ಕರ್ಪ್ಯೂ' ಜಾರಿ.?

ಬೆಂಗಳೂರು: ಕೊರೋನಾ 2ನೇ ಅಲೆಯ ಇಳಿಕೆ ಖುಷಿಯಲ್ಲಿದ್ದಾಗಲೇ, ಈಗ ಕೊರೋನಾ 3ನೇ ಅಲೆಯ ( Corona 3rd Wave ) ಭೀತಿ ಆರಂಭಗೊಂಡಿದೆ. ಅದರಲ್ಲೂ 14 ದೇಶಗಳಲ್ಲಿ ಕಾಣಿಸಿಕೊಂಡಿರುವಂತ ಒಮಿಕ್ರಾನ್ ವೈರಸ್ ( Omicron Variant ) ಆತಂಕ ಹೆಚ್ಚಾಗಿದೆ.

ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಮತ್ತೆ ನೈಟ್ ಕರ್ಪ್ಯೂ ( Night Curfew ) ಜಾರಿಗೊಳಿಸಲಾಗುತ್ತಿದೆ ಎನ್ನಲಾಗಿದೆ.

ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಕೋವಿಡ್ ನಿಯಂತ್ರಣ ಸಭೆ ನಡೆಯಲಿದೆ. ಕೆಲವೇ ಕ್ಷಣಗಳಲ್ಲಿ ಆರಂಭಗೊಳ್ಳುತ್ತಿರುವಂತ ಸಭೆಯಲ್ಲಿ, ಮಹತ್ವದ ನಿರ್ಧಾರವನ್ನು ಕೈಗೊಳ್ಳೋ ಸಾಧ್ಯತೆ ಇದೆ. ಅದರಲ್ಲೂ ಹೈ ರಿಸ್ಕ್ ದೇಶಗಳಿಂದ ಆಗಮಿಸೋ ವಿದೇಶಿ ಪ್ರಯಾಣಿಕರ ಬಗ್ಗೆ ಕಟ್ಟೆಚ್ಚರದಂತ ಕ್ರಮಗಳನ್ನು ತೆಗೆದುಕೊಳ್ಳಲಿದೆ.

ಇದಷ್ಟೇ ಅಲ್ಲದೇ ಕೊರೋನಾ 3ನೇ ಅಲೆಯ ನಿಯಂತ್ರಣಕ್ಕಾಗಿ ಕೋವಿಡ್ ಕಡಿಮೆಯಾದ ಕಾರಣ ರದ್ದುಗೊಳಿಸಲಾಗಿದ್ದಂತ ನೈಟ್ ಕರ್ಪ್ಯೂ ಕ್ರಮವನ್ನು ರಾಜ್ಯದಲ್ಲಿ ಮತ್ತೆ ಜಾರಿಗೊಳಿಸಲಾಗುತ್ತಿದೆ ಎನ್ನಲಾಗಿದೆ. ನೈಟ್ ಕರ್ಪ್ಯೂ ಮೂಲಕ ಕೊರೋನಾ 3ನೇ ಅಲೆಯ ನಿಯಂತ್ರಣದ ಜೊತೆಗೆ ಹೊಸ ರೂಪಾಂತರಿ ವೈರಸ್ ಸೋಂಕಿನ ನಿಯಂತ್ರಣಕ್ಕೂ ಬ್ರೇಕ್ ಹಾಕೋ ನಿರ್ಧಾರಕ್ಕೆ, ಇಂದಿನ ಸಿಎಂ ನೇತೃತ್ವದ ಸಭೆಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ. ಆ ಬಗ್ಗೆ ಸಿಎಂ ಸಭೆಯ ಬಳಿಕ ಖಚಿತ ಮಾಹಿತಿ ಲಭ್ಯವಾಗಲಿದೆ.