ಅಲ್ಲದೇ ಈ ಸಂಬಂಧ ಸ್ಪೀಕರ್ ಕಚೇರಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಮಹತ್ವದ ಮೀಟಿಂಗ್ ಕೂಡ ನಡೆಯುತ್ತಿದೆ. ರಾಜ್ಯ ವಿಧಾನಸಭೆಯಲ್ಲಿ ಮತಾಂತರ ಮಸೂಧೆಯ ವಿರುದ್ಧ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಾಯಕರ ನಡುವೆ ಮಹಾಯುದ್ಧವೇ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರವೇ ಮತಾಂತರ ನಿಷೇಧ ಮಸೂಧೆ ಜಾರಿಗೆ ತರೋದಕ್ಕೆ ಹೊರಟಿತ್ತು ಎಂಬುದಾಗಿ ಪ್ರಸ್ತಾಪಿಸಿದಂತ ಬಿಜೆಪಿ ನಾಯಕರಿಗೆ, ನಾನು ಸಹಿ ಮಾಡಿದ್ದೀನಾ.? 2016ರಲ್ಲಿ ಬಿಲ್ ಸಿದ್ಧಪಡಿಸಿದಾಗ ಸದನದಲ್ಲಿ ಮಂಡಿಸೋದಕ್ಕೆ ತಿಳಿಸಿದ್ದೆನಾ.? ನಾನು ಅಂದು ಕಾನೂನು ಆಯೋಗಕ್ಕೆ ಶಿಫಾರಸ್ಸಿಗೆ ತಿಳಿಸಿದ್ದೆನೇ ಹೊರತು, ಸದನದಲ್ಲಿ ಮಂಡಿಸೋದಕ್ಕೆ ಅಲ್ಲ ಎಂಬುದಾಗಿ ಸಿದ್ಧರಾಮಯ್ಯ ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದಂತ ಸಚಿವ ಜೆ.ಸಿ.ಮಾಧುಸ್ವಾಮಿಯವರು ಸಾರ್.. ನಿಮ್ಮ ಸರ್ಕಾರದಲ್ಲಿ ಮಂಡಿಸೋದಕ್ಕೆ ಬೇರೆಯ ರೀತಿಯಲ್ಲಿಯೇ ಕಾಯ್ದೆ ರೆಡಿಯಾಗಿತ್ತು. ಅದರಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿ, ಕೆಲ ಅಂಶಗಳನ್ನು ಸೇರಿಸಿ, ಈಗ ಜಾರಿಗೆ ತರೋದಕ್ಕೆ ಉದ್ದೇಶಿಸಲಾಗಿದೆ. ನೀವು ಒಪ್ಪಿಗೆ ಸೂಚಿಸಿದ್ರೇ.. ನಿಮ್ಮನ್ನು ಅಭಿನಂದಿಸೋದಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದಂತ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು, ನಾನು ದಾಖಲೆಗಳನ್ನು ಪರಿಶೀಲಿಸುತ್ತೇನೆ. ಆ ಬಳಿಕ ಮಾತನಾಡುವೆ ಎಂದಾಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹಾಗಾದ್ರೇ ನಾವು ನೀವು ಹೋಗಿ ದಾಖಲೆ ಪರಿಶೀಲಿಸಿದ ನಂತ್ರ ಮಾತನಾಡೋಣ ಎಂದು ಸದನವನ್ನು 10 ನಿಮಿಷಗಳ ಕಾಲ ಮುಂದೂಡಿಕೆ ಮಾಡಿ, ಸ್ಪೀಕರ್ ಕಚೇರಿಯಲ್ಲಿ ಈಗ ಕಾಂಗ್ರೆಸ್ ನಾಯಕರು ಹಾಗೂ ಬಿಜೆಪಿ ಸಚಿವರು ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಮತಾಂತರ ಕಾಯ್ದೆಯ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಸಲಾಗುತ್ತಿದೆ.