“ಸಂಜೀವಿನಿ” ಪಾರ್ಕ್ ಬಳಿ ಪ್ರಾಣ ಬಿಟ್ಟ “ಆಪ್ತಮಿತ್ರರು” ಹೆಲ್ಮೇಟ್ ಇದ್ದಿದ್ದರೇ

ಧಾರವಾಡ.

ಧಾರವಾಡ-ಹು ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ಸಂಜೀವಿನಿ ಪಾರ್ಕ ಬಳಿಯಲ್ಲಿ ನಡೆದ ಕಾರು-ಸ್ಕೂಟಿಯ ನಡುವಿನ ಅಪಘಾತದಲ್ಲಿ ಇಬ್ಬರು ಯುವಕರು ದುರ್ಮರಣಕ್ಕೀಡಾಗಿದ್ದಾರೆ. ಸ್ಕೂಟಿಯಲ್ಲಿ ಹೆಲ್ಮೇಟ್ ಹಾಕಿಕೊಳ್ಳದೇ ಹೊರಟಿದ್ದ ಧಾರವಾಡದ ಮದಾರಮಡ್ಡಿಯ ಆಪ್ತಮಿತ್ರರುಗಳಾದ ರವಿ ಹಾವನೂರು ಹಾಗೂ ಸದಾನಂದ ಸಾಂಬ್ರಾಣಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದ ಹಾಗೇ ಸ್ಥಳಕ್ಕೆ ತೆರಳಿದ ಧಾರವಾಡದ ಸಂಚಾರಿ ಠಾಣೆಯ ಪೊಲೀಸರು ಶವವನ್ನ ಸಿವಿಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.