ಕರ್ನಾಟಕ ಸೇರಿದಂತೆ 2031ರ ವೇಳೆಗೆ 20 ಅಣು ವಿದ್ಯುತ್ ಸ್ಥಾವರಗಳನ್ನು ಹೊಂದಲಿದೆ ಭಾರತ
ನವದೆಹಲಿ: 2031 ರ ವೇಳೆಗೆ ದೇಶದಲ್ಲಿ 20 ಹೊಸ ಪರಮಾಣು ವಿದ್ಯುತ್ ಸ್ಥಾವರಗಳು ಕಾರ್ಯಾರಂಭ ಮಾಡಲಿದ್ದು, ಹೆಚ್ಚುವರಿ 15,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತವೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ.
ಹರಿಯಾಣದ ಗೋರಖ್ಪುರ (3 ಮತ್ತು 4ನೇ ಘಟಕಗಳು), ಕರ್ನಾಟಕದ ಕೈಗಾ (5 ಮತ್ತು 6ನೇ ಘಟಕಗಳು), ಮಧ್ಯಪ್ರದೇಶದ ಚುಟ್ಕಾ (1 ಮತ್ತು 2ನೇ ಘಟಕಗಳು) ಮತ್ತು ರಾಜಸ್ಥಾನದ ಮಹಿ ಬನ್ಸ್ವಾರದಲ್ಲಿ ನಾಲ್ಕು ಘಟಕಗಳ ನಿರ್ಮಾಣಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ಮತ್ತು ಆರ್ಥಿಕ ಅನುಮೋದನೆ ನೀಡಿದೆ. ಈ 10 ಘಟಕಗಳು 700 ಮೆಗಾವ್ಯಾಟ್ ಆಗಿರಲಿವೆ. ಈ 10 ಪರಮಾಣು ವಿದ್ಯುತ್ ಸ್ಥಾವರಗಳು 2031 ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.