ಕೋಟಿಗೊಬ್ಬ 3, ನೋಡಲು ಬಂದ್ ಸುದೀಪ್ ಅಭಿಮಾನಿಗಳಿಗೆ ಬೇಸರ ಎದುರಾಯಿತು
ಕಿಚ್ಚ ಸುದೀಪ್ ಅಭಿನಯದ ಹೈ ಬಜೆಟ್ ಸಿನಿಮಾ ಕೋಟಿಗೊಬ್ಬ 3 ಇಂದು ರಾಜ್ಯಾದ್ಯಂತ ತೆರೆಕಾಣಬೇಕಿತ್ತು. ಆದ್ರೆ ತಾಂತ್ರಿಕ ದೋಷದಿಂದ ಕೋಟಿಗೊಬ್ಬ 3 ಬಿಡುಗಡೆ ಆಗಲಿಲ್ಲ, ಈ ಬೆನ್ನಲ್ಲೇ ಧಾರವಾಡ ಪದ್ಮಾ ಚಿತ್ರಮಂದಿರದಲ್ಲಿ ಸುದೀಪ್ ಅಭಿಮಾನಿಗಳು, ಪ್ರೇಕ್ಷಕರು ಸಿನಿಮಾ ನೋಡಲು ನಿನ್ನೆ ಟಿಕೇಟ್ ಪಡೆದುಕೊಂಡಿದ್ದರು. ಅದ್ರಂತೆ ಇಂದು ಬೆಳ್ಳಗೆ ಕಿಚ್ಚನ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು. ಆದ್ರೆ ಟೈಮ್ 12, ಆಗ್ತಿದಂತೆ ಚಿತ್ರ ಇಂದು ಬಿಡುಗಡೆ ಆಗುಲ್ಲ ಅಂತಾ ಟಾಕೀಸ್ ಮಾಲಿಕರು ಹೇಳ್ತಿದ್ದಾಗೆ, ಯಾಕೇ ಅಂತಾ ಜಗಳಕ್ಕೆ ಅಭಿಮಾನಿಗಳು ಮುಂದಾದರು. ಅನಂತರ ಚಿತ್ರಮಂದಿರದ ಮ್ಯಾನೇಜರ್ ನಮ್ಮ ಕಡೆ ಅಷ್ಯ ಅಲ್ಲಾ ರಾಜ್ಯಾದ್ಯಂತ ಎಲ್ಲಿಯೋ ಚಿತ್ರ ಇಂದು ಬಿಡುಗಡೆ ಆಗ್ತಿಲ್ಲ, ಮಾಹಿತಿ ನೀಡಿದ ತಕ್ಷಣ ಸುದೀಪ್ ಅಭಿಮಾನಿಗಳು ಕಿಚ್ಚಾ ಕಿಚ್ಚಾ ಎಂದು ಘೋಷಣೆ ಹಾಕುತ್ತಾ ಟಾಕೀಸ್ ನವರು ಜೊತೆ ಜಗಳಕ್ಕೆ ಮುಂದಾದರು. ಕೆಲವು ಸಮಯ ಮಾತಿನ ಚಕಮಕಿ ಕೂಡಾ ನಡೆಯಿತ್ತು. ಅನಂತರ ಪೊಲೀಸರು ಮಧ್ಯವಹಿಸಿ ಪ್ರೇಕ್ಷಕರಿಗೆ ತಿಳಿ ಹೇಳಿದ ಬಳಿಕ ಟಿಕೇಟ್ ಪಡೆದವರು ಮತ್ತೆ ಸರದಿ ಸಾಲಿನಲ್ಲಿ ನಿಂತು ಹಣ ವಾಪಸ್ಸು ಪಡೆದುಕೊಂಡ ನಿರಾಶೆಯಿಂದ ಹಿಂತಿರುಗಿದರು.