ಕೈಕೈ ಮಿಲಾಯಿಸಿದ ಬಿಜೆಪಿ ಶಾಸಕ, ಎಮ್‍ಎಲ್‍ಸಿ | Hubli | Jagadish Shettar |
ಬಿಜೆಪಿ ಶಾಸಕ, ಎಮ್‍ಎಲ್‍ಸಿ ನಡುವಿನ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆಯೊಂದು ಹುಬ್ಬಳ್ಳಿಯ ಖಾಸಗಿ ಹೊಟೇಲಿನಲ್ಲಿ ನಡೆದಿದೆ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಚುನಾವಣೆಯ ಉಸ್ತುವಾರಿ ಹಂಚಿಕೆ ವಿಚಾರದಲ್ಲಿ ಶುರುವಾದ ಗಲಾಟೆ ರಾಣೆಬೆನ್ನೂರು ಬಿಜೆಪಿ ಶಾಸಕ ಅರುಣಕುಮಾರ ಹಾಗೂ ಎಂಎಲ್ ಸಿ ಆರ್.ಶಂಕರ್ ನಡುವಿನ ಗಲಾಟೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಸೇರಿದಂತೆ ಹಲವು ಮುಖಂಡರ ಸಮ್ಮುಖದಲ್ಲಿಯೇ ಶುರುವಾಗಿದೆ. ಶಾಸಕ ಅರುಣಕುಮಾರ ಅವರನ್ನು ಹಾವೇರಿ ಜಿಲ್ಲಾ ಬಿಜೆಪಿ ಮುಖಂಡರು ಸಮಾಧಾನ ಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇನ್ನೂ ಉಭಯ ಶಾಸಕರ ಗಲಾಟೆ ತಾರಕಕ್ಕೆ ಏರಿದೆ.