ಚಿರತೆ ಸೇರೆ ಹಿಡಿಯಲು ಕಾಯ್ತಿರುವ ಅರಣ್ಯಧಿಕಾರಿಗಳು.

ಕಳೆದ ಐದಾರು ದಿನಗಳಿಂದ ಚಿರತೆ ಹಾವಳಿಯಿಂದ ಧಾರವಾಡ ಜಿಲ್ಲೆದ್ಯಂತ ಗ್ರಾಮೀಣ ಭಾಗದ ಜನತೆ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಹೌದು ಆರು ದಿನಗಳ ಹಿಂದೇ ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಚಿರತೆ ಪತ್ತೆಯಾಗಿದ್ದು, ಚಿರತೆ ಸ್ಥಳೀಯರು ಭಯದಲ್ಲಿ ಬದುಕುತ್ತಿದ್ದಾರೆ. ಅದ್ರಂತೆ ಕೂಡಾ ಮೂರ ದಿನಗಳಿಂದ ಧಾರವಾಡ ತಾಲ್ಲೂಕಿನ ಕವಲಗೇರಿ ಗ್ರಾಮದ ಕಬ್ಬಿನ ಕದ್ದಿಯಲ್ಲಿ ಚಿರತೆ ಕಂಡದೆ ಎಂಬ ಮಾಹಿತಿ ಬಂದ್ ಬೆನ್ನಲ್ಲೇ ಕವಲಗೇರಿ ಅಷ್ಟೇ ಅಲ್ಲದೆ ಸುತ್ತಲಿನ ಗ್ರಾಮದ ಜನತೆ ಕೂಡ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೆ ಅರಣ್ಯಾಧಿಕಾರಿಗಳು ಸಹ ಚಿರತರ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ವಲಯ ಅರಣ್ಯಾಧಿಕಾರಿ ಆರ್.ಎಸ್ ಉಪ್ಪಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.  ಮೂರು ದಿನಗಳ ಹಿಂದೆ ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡಿದ್ದ ಚಿರತೆ, ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಅರವಳಿಕೆ ಮದ್ದು, ಜಾಳಿಗೆಯೊಂದಿಗೆ ಕಾಯುತ್ತಿರುವ ಅರಣ್ಯ ತಂಡದವರು, ಚಿರತೆ ಹಿಡಿದು ಜನರ ಭಯ ಹೊಗಲಾಡಿಸುತ್ತಾರೆ ಎಂಬುದು ಕಾದೂನೋಡಬೇಕಿದೆ.