ಡಾರ್ಲಿಂಗ್ ಪ್ರಭಾಸ್ ಜೊತೆಗಿನ ಲವ್ ವದಂತಿ ಬಗ್ಗೆ ಕೃತಿ ಸನೋನ್ ಸ್ಪಷ್ಟನೆ

ಡಾರ್ಲಿಂಗ್ ಪ್ರಭಾಸ & ಕೃತಿ ಸನೋನ್ ನಡುವೆ ಪ್ರೀತಿ-ಪ್ರೇಮ, ಡೇಟಿಂಗ್ ವಿಚಾರವಾಗಿ ಹಲವು ದಿನಗಳಿಂದ ಎಲ್ಲೆಡೆ ಸುದ್ದಿ ಹರಿದಾಡುತ್ತಿದೆ. ಇದೀಗ ಈ ಊಹಾಪೋಹಗಳಿಗೆ ಕೃತಿ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ. ಈ ಹಿಂದೆ ಕರಣ್ ಜೋಹರ್ ಕಾರ್ಯಕ್ರಮದಲ್ಲಿ ವರುಣ್ ಈ ವಿಚಾರವಾಗಿ ಮಾತನಾಡಿದ್ದರು. ಈ ಬಗ್ಗೆ ತಿಳಿಸಿದ ಕೃತಿ "ಇದು ಪ್ರಚಾರದ ಗಿಮಿಕ್ ಅಲ್ಲ. ವರುಣ್ ಸ್ವಲ್ಪ ಬೈಲ್ಡ್ ಆಗಿ ನಡೆದುಕೊಂಡರು ಅಷ್ಟೇ. ಅದು ತಮಾಷೆಗೆ ಆಡಿದ ಮಾತು. ಬೇರೆ ಯಾರೋ ನನ್ನ ಮದುವೆ ಡೇಟ್ ಅನೌನ್ಸ್ ಮಾಡುವ ಮುನ್ನ ನಾನು ಆ ಭ್ರಮೆಯನ್ನು ತೊಡೆದುಹಾಕುತ್ತೇನೆಂದು" ಬರೆದುಕೊಂಡಿದ್ದಾರೆ.