ಶ್ರವಣೂರು ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತ ತೆರವು

ಶ್ರವಣೂರು ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತ ತೆರವು

ಹಾಸನ: ಜಿಲ್ಲೆಯ ಹೊಳೆನರಸೀಪುರ ತಾ|ನ ಶ್ರವಣೂರು ಗ್ರಾಮದಲ್ಲಿ ಅನುಮತಿ ಪಡೆಯದೇ ನಿರ್ಮಾಣ ಮಾಡಲಾಗಿದ್ದ ಸಂಗೊಳ್ಳಿ ರಾಯಣ್ಣ ವೃತ್ತವನ್ನು ಇಂದು ಬೆಳಗ್ಗೆ ಪೊಲೀಸ್‌‌ ಸರ್ಪಗಾವಲಿನಲ್ಲಿ ತೆರವು ಮಾಡಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇದೀಗ ಗ್ರಾಮಸ್ಥರ ವಿರೋಧದ ನಡುವೆ ಪೊಲೀಸರು ಸರ್ಪಗಾವಲಿನಲ್ಲಿ ಚೌಕಿನ ತೆರವುಗೊಳಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌‌‌‌ ಬಂದೋಬಸ್ತ್‌‌‌ ಕೈಗೊಳ್ಳಲಾಗಿದೆ.