ನಲಿಯೋಣು ಬಾರ ಕುಣಿಯೋಣು ಬಾರ
ಮತ್ತೆ ಚಿನ್ನರ ಶಾಲೆ ಆರಂಭ, ಮಕ್ಕಳ ಮುಖದಲ್ಲಿ ಸಂತಸ.ಕೊರೊನಾ ಮಹಾ ಮಾರಿಯಿಂದ ಸುಮಾರು ತಿಂಗಳಿಂದ ಶಾಲೆ ಮಿಸ್ ಮಾಡಿಕೊಂಡಿದ್ದ ಚಿನ್ನರಿಗೆ ಇವತ್ತು ಮತ್ತೆ ಶಾಲೆ ಆರಂಭವಾಗಿದ್ದು, ಹಬ್ಬದ ವಾತಾವರಣ ನಿರ್ಮಾವಾಗಿದೆ. ವರ್ಷಗಳಿಂದ ಸ್ನೇಹಿತರ ಜೊತೆ ಮಾತನಾಡಿದ ಬೇಜಾರಿನಲ್ಲಿದ್ದ ವಿದ್ಯಾರ್ಥಿಗಳಿಗೆ ಶಾಲೆ ಆರಂಭವಾಗಿ ಮತ್ತೆ ಮಕ್ಕಳ ಮುಖದಲ್ಲಿ ಸಂತಸ ಮೂಡಿಸಿದೆ. ಹೌದು, ಕೆಲವು ತಿಂಗಳ ಕಾಲ ಶಾಲೆ ಬಂದ್ ಆಗಿದ್ದ ಹಿನ್ನೆಲೆಯಲ್ಲಿ 1 ರಿಂದ 5 ನೇ ತರಗತಿಗಳು ಇಂದಿನಿಂದ ಮತ್ತೆ ಆರಂಭಗೊಂಡಿವೆ. ರಾಜ್ಯದಾದ್ಯಂತ 1 ರಿಂದ 5 ನೇ ತರಗತಿಗಳನ್ನು ಆರಂಭಿಸಲಾಗಿದ್ದು, ಮಕ್ಕಳು ಬೆಳಿಗ್ಗೆಯಿಂದಲೇ ಖುಷಿಯಿಂದ ಶಾಲೆಗಳತ್ತ ಮುಖ ಮಾಡಿದ್ದಾರೆ. ಮಕ್ಕಳಿಗೆ ಶಿಕ್ಷಕರು ಹೂವು, ಚಾಕ್ಲೆಟ್ ನೀಡಿ ಸ್ವಾಗತಿಸಿದರು. ಕೊರೊನಾ ನಂತರ ತಾವುಗಳು ಶಾಲೆಗೆ ಬಂದಿರುವುದಕ್ಕೆ ಮಕ್ಕಳು ಖುಷಿ ಹಂಚಿಕೊಂಡಿದ್ದಾರೆ. ಬಹಳ ದಿನಗಳ ನಂತರ ಶಾಲಾ ಆವರಣ ಮತ್ತೆ ಮಕ್ಕಳಿಂದ ಕಂಗೊಳಿಸುತ್ತಿವೆ. ಎಲ್ಲಾ ಮಕ್ಕಳು ಕೊರೊನಾ ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗೆ ಆಗಮಿಸಿದ್ದು ವಿಶೇಷ. ಮಕ್ಕಳಿಗೆ ಶಿಕ್ಷಕರು ಕೂಡ ಸಂತಸದಿಂದಲೇ ಪಾಠ ಮಾಡುತ್ತಿದ್ದಾರೆ. ಶಾಲೆ ಪ್ರಾರಂಭದ ಎರಡ ದಿನ ಮುಂಚೆ ಮಕ್ಕಳ ಪಾಲಕರನ್ನು ಬೇಟೆ ಮಾಡಿ ಕೊವಿಡ್ ಬಗ್ಗೆ ಹೆದರುವ ಅವಶ್ಯ ಇಲ್ಲಾ, ಮಕ್ಕಳ ಶಾಲೆಗೆ ಕಳಸಿ ಎಂದು ಧೈರ್ಯ ಹೇಳಿದ್ದವಿ, ಕೊವಿಡ್ ವಿಚಾರವಾಗಿ ಮಕ್ಕಳಿಗೆ ಕೂಡಾ ಅರಿವು ಮೂಡಿಸಿದ್ದವೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಹೇಳ್ತಾರೆ. ಒಟ್ಟಿನಲ್ಲಿ ಏನೇ ಆಗಲಿ ಕೊರೊನಾ ನಂತರ ಮಕ್ಕಳು ಮತ್ತೆ ಶಾಲೆಗಳತ್ತ ಮುಖ ಮಾಡುವಂತಾಗಿದೆ. ಮಕ್ಕಳ ಬರುವಿಕೆಯಿಂದ ಶಾಲೆಗಳು ಕಳೆಗಟ್ಟಿವೆ. ಮಕ್ಕಳಿರದೇ ಇಷ್ಟು ದಿನ ಶಾಲೆಗಳು ಬಣಗುಡುತ್ತಿದ್ದವು. ಇದೀಗ 1 ರಿಂದ 5ನೇ ತರಗತಿಗಳು ಪುನರಾರಂಭಗೊಂಡಿದ್ದು, ಮತ್ತೆ ಕಳೆ ಬಂದಂತಾಗಿದೆ.