ಇಂದು ಉಜ್ಜಯಿನಿಯಲ್ಲಿ ಭಾರತ್‌ ಜೋಡೋ ಯಾತ್ರೆ ನಡೆಸಲಿರುವ ರಾಹುಲ್‌

ಇಂದು ಉಜ್ಜಯಿನಿಯಲ್ಲಿ ಭಾರತ್‌ ಜೋಡೋ ಯಾತ್ರೆ ನಡೆಸಲಿರುವ ರಾಹುಲ್‌

ಭೋಪಾಲ್‌: ಕೈ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆ ಇಂದು (ನ.29) ಮಧ್ಯಪ್ರದೇಶ ಪ್ರವೇಶಿಸಿದೆ. 6 ದಿನಗಳ ಯಾತ್ರೆ ನಡೆಸಿದ ರಾಹುಲ್‌ ಗಾಂಧಿ ನೇತೃತ್ವದ ಯಾತ್ರೆ ಸೋಮವಾರ (ನ.28) ಇಂದೋರ್‌ನಿಂದ ಉಜ್ಜಯಿನಿ ತಲುಪಿದೆ. ಈವರೆಗೆ ರಾಹುಲ್‌ ಬುರ್ಹಾನ್‌‌ಪುರ, ‌& ಇಂದೋರ್‌ ಜಿಲ್ಲೆಗಳಲ್ಲಿ ಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ. ಯಾತ್ರೆ ಡಿ.4ರಂದು ರಾಜಸ್ಥಾನಕ್ಕೆ ಪ್ರವೇಶಿಸುವ ಮುನ್ನ 12 ದಿನಗಳಲ್ಲಿ ಮಧ್ಯಪ್ರದೇಶದ ಮಾಲ್ವಾ ನಿಮಾರ್‌‌ ಪ್ರದೇಶದಲ್ಲಿ 380 ಕಿ.ಮೀ. ದೂರ ಕ್ರಮಿಸಲಿದೆ