ಶ್ರದ್ಧಾ ವಾಲ್ಕರ್ ಹತ್ಯೆ: ಆಘಾತಕ್ಕೊಳಗಾದ ಅಫ್ತಾಬ್‌ನ ಹೊಸ ಗರ್ಲ್‌ಫ್ರೆಂಡ್ ವಿಚಾರಣೆ

ದಿಲ್ಲಿ: ತನ್ನ ಲಿವ್ ಇನ್ ಸಂಗಾತಿ ಶ್ರದ್ಧಾ ವಾಲ್ಕರ್‌ಳನ್ನು ಹತ್ಯೆ ಮಾಡಿದ ಬಳಿಕ ಅಫ್ತಾಬ್ ಪೂನಾವಾಲಾ ಜೊತೆ ಆತ್ಮಿಯಲಾಗಿದ್ದ ಮನೋವೈದ್ಯೆ ಆತನ ಭಯಾನಕ ಕೃತ್ಯದ ಬಗ್ಗೆ ತಿಳಿದು ಆಘಾತದಲ್ಲಿದ್ದಾರೆ. ಕೊಲೆ ನಡೆದ ದಿನದ ಬಳಿಕ ಎರಡು ಬಾರಿ ಅಫ್ತಾಬ್ ಫ್ಲ್ಯಾಟ್‌ಗೆ ಭೇಟಿ ನೀಡಿದ್ದ ತನಗೆ, ಮನುಷ್ಯರ ದೇಹದ ಭಾಗಗಳನ್ನು ಅಲ್ಲಿ ಇರಿಸಲಾಗಿದೆ ಎಂಬ ಸುಳಿವೇ ಇರಲಿಲ್ಲ ಎಂದು ತಿಳಿಸಿದ್ದಾರೆ. ಪೊಲೀಸರು, ಆಕೆಯ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ.