ಉಳವಿ ಚೆನ್ನಬಸವಣ್ಣತ್ತ ಪಾದಯಾತ್ರೆ ನಡೆಸುತ್ತಿರುವ ಶಾಸಕ ಅಮೃತ ದೇಸಾಯಿ...

ಅವರೊಬ್ಬ ಗ್ರಾಮೀಣ ಶಾಸಕ ಪ್ರತಿವರ್ಷದಂತೆ ಈ ವರ್ಷವು ಶ್ರೀ ಕ್ಷೇತ್ರ ಉಳವಿ ಚೆನ್ನಬಸವಣ್ಣ ಕ್ಷೇತ್ರಕ್ಕೆ ಅವರು ಕುಟುಂಬದ ಜೊತೆ ಪಾದಯಾತ್ರೆ ಆರಂಭಿಸಿದ್ದಾರೆ, ಹೌದು ಶಾಸಕರು ಎಲ್ಲಿಂದ ಎಲ್ಲಿಯವರೆಗೆ ಪಾದಯಾತ್ರೆ ಆರಂಬಿಸಿದ್ದಾರೆ. ಯಾಕೆ ಪಾದಯಾತ್ರೆ ಅಂತೀರಾ ಈ ಸ್ಟೋರಿ ನೋಡಿ.. ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರು ಧಾರವಾಡ ತಾಲೂಕಿನ ಗರಗ ಗ್ರಾಮದಿಂದ ಶ್ರೀಕ್ಷೇತ್ರ ಉಳವಿಯತ್ತ ಪಾದಯಾತ್ರೆ ಆರಂಭಿಸಿದ್ದಾರೆ. ಗರಗ ಗ್ರಾಮದ ಕಲ್ಮಠದಿಂದ ಆರಂಭಿಸಲಾದ ಈ ಪಾದಯಾತ್ರೆಗೆ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ,ಮಡಿವಾಳೇಶ್ವರ ಕಲ್ಮಟದ ಚನ್ನಬಸವ ಸ್ವಾಮೀಜಿ, ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರುಪಾಕ್ಷ ಸ್ವಾಮೀಜಿಗಳು ಚಾಲನೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಮೃತ, ಇದು ಐದನೇ ವರ್ಷದ ಪಾದಯಾತ್ರೆಯಾಗಿದೆ ಎಂದರು ಶಾಸಕ ಅಮೃತ ದೇಸಾಯಿ, ಅವರ ತಂದೆ ಮಾಜಿ ಶಾಸಕರು ಎ.ಬಿ.ದೇಸಾಯಿ, ಪತ್ನಿ ಪ್ರಿಯಾ ದೇಸಾಯಿ, ಅಶೋಕ ದೇಸಾಯಿಯವರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಈ ಪಾದಯಾತ್ರೆಯಲ್ಲಿ ಧಾರವಾಡ ಗ್ರಾಮೀಣ ಹಾಗೂ ಧಾರವಾಡ ಶಹರ ಸೇರಿದಂತೆ ಸಾವಿರಾರು ಜನ, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದಾರೆ. ಕ್ಷೇತ್ರದ ಜನತೆಗೆ ಒಳ್ಳೆಯದಾಗಲಿ ಎಂದು ಪ್ರತಿವರ್ಷ ಪಾದಯಾತ್ರೆ ಮಾಡುತ್ತಿರುವುದಾಗಿ ಶಾಸಕ ಅಮೃತ ಅವರ ಪತ್ನಿ ಪ್ರಿಯಾ ದೇಸಾಯಿ ಹೇಳಿದರು.ಒಟ್ಟಿನಲ್ಲಿ ಗರಗದಿಂದ ಆರಂಭವಾದ ಈ ಪಾದಯಾತ್ರೆ ಸಂಜೆ ನಿಗದಿ ಗ್ರಾಮಕ್ಕೆ ಬಂದು ತಲುಪಲಿದೆ. ಅಲ್ಲಿ ವಾಸ್ತವ್ಯ ಮಾಡುವ ಶಾಸಕರು, ನಾಳೆ ಅಲ್ಲಿಂದ ಮತ್ತೆ ಪಾದಯಾತ್ರೆ ಆರಂಭಿಸಲಿದ್ದಾರೆ. ಭಾನುವಾರ ಬೆಳಿಗ್ಗೆ ಶಾಸಕರು ಶ್ರೀಕ್ಷೇತ್ರ ಉಳವಿ ತಲುಪಲಿದ್ದಾರೆ......