ಹುಬ್ಬಳ್ಳಿಗೂ ವ್ಯಾಪಿಸಿದ ವೋಟರ್ ಐಡಿ ಹಗರಣ

ಹುಬ್ಬಳ್ಳಿ - ರಾಜ್ಯಾದ್ಯಂತ ದೊಡ್ಡ ವಿವಾದ ಸೃಷ್ಟಿಸಿರುವ ಮತದಾರರ ಮಾಹಿತಿ ಹಗರಣ ಈಗ ವಾಣಿಜ್ಯ ನಗರಿ ಹುಬ್ಬಳ್ಳಿಗೂ ಅಂಟಿಕೊಂಡಿದೆ. ಆರು ತಿಂಗಳ ಹಿಂದೆಯೇ ಖಾಸಗಿ ಕಂಪನಿಯಿಂದ ಮತದಾರರ ಮಾಹಿತಿ ಸಂಗ್ರಹಮಾಡಲಾಗಿದ್ದು ತಿಳಿದು ಬಂದಿದೆ.
ಧಾರವಾಡ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಮಾಹಿತಿ ಸಂಗ್ರಹ ಮಾಡಲಾಗಿದೆ ಎನ್ನಲಾಗುತ್ತಿದೆ. ಬೆಂಗಳೂರು ಮೂಲದ ಐಐಎಂಟಿ ಸಂಸ್ಥೆಯಿಂದ ಮತದಾರರ ಮಾಹಿತಿ ಸಂಗ್ರಹ ಮಾಡಿರುವ ವಿಷಯ ಹೊರಬಿದ್ದಿದೆ. ಕಾಂಗ್ರೆಸ್ ಪಾಲಿಕೆ ಸದಸ್ಯರ ವ್ಯಾಪ್ತಿಯಲ್ಲಿ ಮತದಾರರ ಮಾಹಿತಿ ಸಂಗ್ರಹವನ್ನು ಮಾಡಲಾಗಿದ್ದು, ಕಾಂಗ್ರೆಸ್ ಪಾಲಿಕೆ ಸದಸ್ಯರು ಮತದಾರರ ಮಾಹಿತಿ ಸಂಗ್ರಹ ವಿಷಯ ಗೊತ್ತಾಗಿ ಆಯುಕ್ತರ ಗಮನಕ್ಕೆ ತಂದಿರೋ ವಿಚಾರ ಬೆಳಕಿಗೆ ಬಂದಿದೆ. ಚಿಲುಮೆ ಸಂಸ್ಥೆಯ ಬಣ್ಣ ಬಯಲಾಗುತ್ತಲೇ ಇತ್ತ ಹುಬ್ಬಳ್ಳಿಯಲ್ಲೂ ಮತದಾರರ ಮಾಹಿತಿ ಸಂಗ್ರಹದ ಶಂಕೆ ಶುರುವಾಗಿದೆ. ಸ್ಮಾರ್ಟ್ ಸಿಟಿ ತಂಡದಿಂದ ಸರ್ವೆಗೆ ಬಂದಿರುವುದಾಗಿ ಹೇಳಿದ್ದ ತಂಡ, ಕೇವಲ ಪಾಲಿಕೆಯಿಂದ ಸ್ವೀಕೃತಿ ಪತ್ರವನ್ನು ಮಹಾನಗರ ಪಾಲಿಕೆ ಆಯುಕ್ತರು ನೀಡಿದ್ದರು. ಹುಬ್ಬಳ್ಳಿಯಲ್ಲೂ ಮತದಾರರ ಮಾಹಿತಿ ಸಂಗ್ರಹ ಮಾಡಿದ್ರಾ ಅನ್ನೋ ಅನುಮಾನ ಬಂದಿದ್ದು, ಗಾರ್ಡನ್ ರೀಸರ್ಚ್ ಸೊಸೈಟಿಯಿಂದ ಪಾಲಿಕೆ ಅನುಮತಿ ಕೇಳಿ ಪತ್ರವನ್ನು ಕೇಳಲಾಗಿತ್ತು. ಈ ಕುರಿತು ಪಾಲಿಕೆ ಯಾವುದೇ ಅನುಮತಿ ನೀಡಿರಲಿಲ್ಲ ಎಂದು ತಿಳಿದು ಬಂದಿದೆ.