ವಂಚನೆ ಪ್ರಕರಣ; ಚಂದಾ ಕೊಚ್ಚರ್‌ ದಂಪತಿ ಬಿಡುಗಡೆಗೆ ಹೈಕೋರ್ಟ್ ಆದೇಶ

ವಂಚನೆ ಪ್ರಕರಣ; ಚಂದಾ ಕೊಚ್ಚರ್‌ ದಂಪತಿ ಬಿಡುಗಡೆಗೆ ಹೈಕೋರ್ಟ್ ಆದೇಶ

ಮುಂಬೈ: ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಐಸಿಐಸಿ ಬ್ಯಾಂಕ್​​ನ ಮಾಜಿ ಮುಖ್ಯ ಕಾರ್ಯನಿರ್ವಹಣಧಿಕಾರಿ & ವ್ಯವಸ್ಥಾಪಕ ನಿರ್ದೆಶಕಿ ಚಂದಾ ಕೊಚ್ಚರ್ & ಅವರ ಪತಿ ದೀಪಕ್ ಕೊಚ್ಚರ್​ ಅವರನ್ನು ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್ ಸೋಮವಾರ ಆದೇಶ ನೀಡಿದೆ. ಇಬ್ಬರನ್ನೂ ಸಿಬಿಐ ಅಧಿಕಾರಿಗಳು ಡಿ.23ರಂದು ಬಂಧಿಸಿದ್ದರು. ಚಂದಾ & ದೀಪಕ್ ಅವರ ಬಂಧನ ಕಾನೂನು ಸಮ್ಮತವಾಗಿಲ್ಲ ಎಂದು ಬಾಂಬೆ ಹೈಕೋರ್ಟ್ ಇದೀಗ ಅಭಿಪ್ರಾಯಪಟ್ಟಿದೆ.