ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಗೈದ ಆರೋಪಿ ಬಂಧನ

ಎಗ್ ರೈಸ್ ತಿನ್ನಿಸುವ ಆಸೆ ತೋರಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಬಂಧಿಸುವಲ್ಲಿ, ಧಾರವಾಡದ ಪೆÇಲೀಸರು ಸಫಲರಾಗಿದ್ದಾರೆ. 13 ವರ್ಷದ ಬಾಲಕಿಯ ಅತ್ಯಾಚಾರಗೈದ ಆರೋಪಿಯೇ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಶರಣಪ್ಪ ತಳವಾರ. ಇನ್ನೂ ಭಿಕ್ಷೆ ಬೇಡುತಿದ್ದ ಬಾಲಕಿಯನ್ನು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ದೂರಿನ ಆಧಾರದ ಮೇಲೆ ಆರೋಪಿ ಹುಡುಕಾಟ ನಡೆಸಿದ್ದ ಧಾರವಾಡ ಉಪನಗರ ಠಾಣೆ ಪೆÇಲೀಸರು, ಶರಣಪ್ಪ ತಳವಾರ ಎಂಬಾತನನ್ನು ಬಂಧಿಸಿದ್ದಾರೆ.