ಲಾಡ್ಜ್ ನಲ್ಲಿ ಸುರಂಗ ಮಾರ್ಗದಲ್ಲಿ ವೇಶ್ಯಾವಾಟಿಕೆ.

ಲಾಡ್ಜ್ ನಲ್ಲಿ ಸುರಂಗ ಮಾರ್ಗ ಮಾಡಿ ಅದರ ಸುರಂಗದಲ್ಲಿ ವೇಶ್ಯಾವಾಟಿಕೆಯನ್ನು ನಡೆಸುತ್ತಿದ್ದ ಜಾಲವನ್ನು ತುಮಕೂರಿನಲ್ಲಿ ಪತ್ತೆಯಾಗಿದೆ .ಹೌದು ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಲಾಗಿದ್ದು ಸುರಂಗ ಮಾರ್ಗದಲ್ಲಿ ನಡೆಯು ತ್ತಿದ್ದ ಜಾಲವನ್ನು ಪತ್ತೆ ಮಾಡಲಾಗಿದ್ದು ಹಲವರನ್ನು ಬಂಧನ ಮಾಡಲಾಗಿದೆ. ತುಮಕೂರಿನ ರಿಂಗ್ ರಸ್ತೆಯ ಲಾಡ್ಜ್ ವೊಂದರ ಮೇಲೆ ದಾಳಿ ಮಾಡಲಾಗಿದೆ.ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಪೊಲೀಸರ ನೇತೃತ್ವದಲ್ಲಿ ಈ ಒಂದು ದಾಳಿಯಾಗಿದೆ.ದಾಳಿ ವೇಳೆ ರೂಂ ಒಂದರಲ್ಲಿ ಸುರಂಗ ಪತ್ತೆ ಹಚ್ಚಿದೆ. ಸುರಂಗದಲ್ಲಿ ಅಡಗಿಕೊಂಡಿದ್ದ ಪಿಂಪ್ ಗಳನ್ನು ಬಂಧನ ಮಾಡಲಾಗಿದೆ.ಇಬ್ಬರು ಯುವತಿಯರು ಹಾಗೂ ಓರ್ವ ಪಿಂಪ್ ನನ್ನು ಬಚ್ಚಿಟ್ಟುಕೊಂಡಿದ್ದರು. ಮೊನ್ನೆಯಷ್ಟೇ ಈ ಲಾಡ್ಜ್ ಸನಿಹ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡೋಂಮ್ಗಳು ಕಂಡು ಬಂದಿದ್ದ ವು.ವಿಷಯ ತಿಳಿದು ತನಿಖೆ ಆರಂಭಿಸಿದ್ದ ಒಡನಾಡಿ ಸಂಸ್ಥೆ ವಿಷಯ ತಿಳಿದು ತನಿಖೆ ಆರಂಭಿಸುತ್ತಿದ್ದಂತೆ ಈ ಒಂದು ಜಾಲ ಪತ್ತೆಯಾಗಿದೆ. ನಿಖರ ಮಾಹಿತಿ ಅನ್ವಯ ತಡರಾತ್ರಿ ಪೊಲೀಸ ರೊಂದಿಗೆ ದಾಳಿ ಮಾಡಲಾಗಿದೆ.ವಿಷಯ ತಿಳಿದು ತನಿಖೆ ಆರಂಭಿಸಿದ್ದ ಒಡನಾಡಿ ಸಂಸ್ಥೆಗೆ ಕೊನೆಗೂ ನಿಜವಾದ ಮಾಹಿತಿ ಪತ್ತೆಯಾಗಿದೆ.ಒಟ್ಟು ಐವರನ್ನು ಬಂಧನ ಮಾಡಲಾಗಿದ್ದು ಲಾಡ್ಜ್ ನ್ನು ವಶಕ್ಕೆ ಪಡೆದಿ ರುವ ಪೊಲೀಸರು ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಕುರಿತು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ