ಕಬ್ಜ ಫಸ್ಟ್ ಡೇ ಕಲೆಕ್ಷನ್ ಘೋಷಣೆ; ಆ ಒಂದು ಚಿತ್ರ ಬಿಟ್ಟು ಇನ್ನೆಲ್ಲಾ ಸಿನಿಮಾಗಳ ದಾಖಲೆ ಉಡೀಸ್!

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಶನ್‌ನ ಬಹು ನಿರೀಕ್ಷಿತ ಸಿನಿಮಾ ಕಬ್ಜ ನಿನ್ನೆ ( ಮಾರ್ಚ್ 17 ) ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಬೆಳ್ಳಿತೆರೆಗೆ ಅಪ್ಪಳಿಸಿದೆ. ಸೆಟ್ಟೇರಿದಾಗಿನಿಂದಲೂ ಸತತವಾಗಿ ಸದ್ದು ಮಾಡುತ್ತಾ ಸುದ್ದಿಗೀಡಾಗಿ ಬೃಹತ್ ಕುತೂಹಲ ಮೂಡಿಸಿದ್ದ ಕಬ್ಜ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಲೇಬೇಕೆಂದು ಸಿನಿ ರಸಿಕರು ಕಾತರರಾಗಿ ಚಿತ್ರಮಂದಿರಗಳತ್ತ ಹೆಜ್ಜೆ ಹಾಕಿದ್ದರು.
ಒಂದೇ ಚಿತ್ರದಲ್ಲಿ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವ ರಾಜ್‌ಕುಮಾರ್ ಅವರನ್ನು ನೋಡಿದ ಸಿನಿ ರಸಿಕರು ಥ್ರಿಲ್ ಆಗಿದ್ದು, ಚಿತ್ರದ ಮೇಕಿಂಗ್, ಛಾಯಾಗ್ರಹಣ, ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಹಾಗೂ ಸಂಕಲನವನ್ನು ಕೊಂಡಾಡುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಕಬ್ಜ ಚಿತ್ರ ವಿಶ್ವದಾದ್ಯಂತ 4000ಕ್ಕೂ ಹೆಚ್ಚು ಪರದೆಗಳಲ್ಲಿ ತೆರೆಕಂಡಿದೆ.
ಹೀಗೆ ದೊಡ್ಡಮಟ್ಟದಲ್ಲಿ ರಿಲೀಸ್ ಆಗಿರುವ ಕಬ್ಜ ಚಿತ್ರ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಅನ್ನೂ ಸಹ ಮಾಡಿದೆ. ಹೌದು, ವಿಶ್ವದಾದ್ಯಂತ 40 ಕೋಟಿಗೂ ಹೆಚ್ಚು ಗಳಿಕೆಯನ್ನು ಮಾಡಿರುವ ಕಬ್ಜ ಚಿತ್ರ ಕರ್ನಾಟಕದಲ್ಲಿ ಮೊದಲ ದಿನ ಬರೋಬ್ಬರಿ 26 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಈ ಮೂಲಕ ಮೊದಲ ದಿನ ಅತಿಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರಗಳ ಪಟ್ಟಿಯಲ್ಲಿ ಕಬ್ಜ ಚಿತ್ರ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಬಿಡುಗಡೆ ದಿನ 31 ಕೋಟಿ ಗಳಿಕೆ ಮಾಡಿದ್ದ ಕೆಜಿಎಫ್ ಚಾಪ್ಟರ್ 2 ಚಿತ್ರ ಮೊದಲ ಸ್ಥಾನದಲ್ಲಿಯೇ ಉಳಿದುಕೊಂಡಿದೆ.
ಬಿಡುಗಡೆ ದಿನ ಅತಿಹೆಚ್ಚು ಗಳಿಕೆ ಮಾಡಿದ ಕನ್ನಡ ಸಿನಿಮಾಗಳ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ..
1. ಕೆಜಿಎಫ್ ಚಾಪ್ಟರ್ 2 - 31 ಕೋಟಿ
2. ಕಬ್ಜ - 26 ಕೋಟಿ
3 .ಜೇಮ್ಸ್ - 22 ಕೋಟಿ
4. ವಿಕ್ರಾಂತ್ ರೋಣ - 16 ಕೋಟಿ
5. ಕೆಜಿಎಫ್ ಚಾಪ್ಟರ್ - 13 ಕೋಟಿ
ಹೀಗೆ ಮೊದಲ ದಿನ ಅಬ್ಬರದ ಕಲೆಕ್ಷನ್ ಮಾಡಿರುವ ಕಬ್ಜ ಚಿತ್ರ ಕೆಜಿಎಫ್ ಚಾಪ್ಟರ್ 1, ವಿಕ್ರಾಂತ್ ರೋಣ ಹಾಗೂ ಜೇಮ್ಸ್ ಚಿತ್ರಗಳ ದಾಖಲೆಗಳನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಚಿತ್ರ ಉಪೇಂದ್ರ ಸಿನಿ ಜೀವನದ ಮೊದಲ ಪ್ಯಾನ್ ಇಂಡಿಯಾ ಚಿತ್ರವೆನಿಸಿಕೊಳ್ಳುವುದರ ಜತೆಗೆ ಬಿಡುಗಡೆ ದಿನ ಅತಿಹೆಚ್ಚು ಗಳಿಕೆ ಕಂಡ ಉಪೇಂದ್ರ ಸಿನಿಮಾ ಎಂಬ ಸಾಧನೆಯನ್ನೂ ಸಹ ಮಾಡಿದೆ.
ಇನ್ನು ಮೊದಲ ದಿನ ಚಿತ್ರದ ಕಲೆಕ್ಷನ್ ಇಷ್ಟಾಗಿದ್ದು, ಎರಡನೇ ದಿನ ವೀಕೆಂಡ್ ರಜೆ ಇರುವ ಕಾರಣ ಇನ್ನಷ್ಟು ಹೆಚ್ಚು ಗಳಿಕೆ ಮಾಡಲಿದೆ ಎನ್ನಲಾಗಿದೆ ಹಾಗೂ ಬಿಡುಗಡೆಯಾದ ಎರಡೇ ದಿನಕ್ಕೆ ಚಿತ್ರ ನೂರು ಕೋಟಿ ಕ್ಲಬ್ ಸೇರಿದರೂ ಆಶ್ಚರ್ಯವಿಲ್ಲ ಎನ್ನಬಹುದು.
ಕಬ್ಜ ಸಿನಿಮಾ ಮೊದಲ ದಿನಕ್ಕಿಂತ ಎರಡನೇ ದಿನವೇ ಬೆಂಗಳೂರಿನಲ್ಲಿ ಹೆಚ್ಚು ಪ್ರದರ್ಶನಗಳನ್ನು ಕಾಣುತ್ತಿದ್ದು, ಕಲೆಕ್ಷನ್ ಹೆಚ್ಚಾಗುವುದರಲ್ಲಿ ಯಾವುದೇ ಡೌಟ್ ಇಲ್ಲ. ಹೌದು, ಮೊದಲ ದಿನ ಬೆಂಗಳೂರಿನಲ್ಲಿ 597 ಪ್ರದರ್ಶನಗಳನ್ನು ಪಡೆದುಕೊಂಡಿದ್ದ ಕಬ್ಜ ಚಿತ್ರ ಇಂದು ಎರಡನೇ ದಿನ 623 ಪ್ರದರ್ಶನಗಳನ್ನು ಪಡೆದುಕೊಂಡಿದೆ.
ಈ ರೀತಿ ಈ ವರ್ಷ ತೆರೆಕಂಡ ಯಾವ ಸಿನಿಮಾಗಳೂ ಸಹ ಬೆಂಗಳೂರಿನಲ್ಲಿ ಮೊದಲ ದಿನಕ್ಕಿಂತ ಎರಡನೇ ದಿನ ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಂಡಿರಲಿಲ್ಲ. ಮೊದಲ ದಿನ ದೊಡ್ಡ ಸಂಖ್ಯೆಯ ಪ್ರದರ್ಶನಗಳನ್ನು ಪಡೆದುಕೊಂಡಿದ್ದ ಚಿತ್ರಗಳು ಎರಡನೇ ದಿನ ಕಡಿಮೆ ಪ್ರದರ್ಶನಗಳನ್ನು ಪಡೆದುಕೊಂಡು ಶೋಗಳನ್ನು ಕಳೆದುಕೊಂಡಿದ್ದವು. ಈ ವರ್ಷ ತೆರೆಕಂಡ ಚಿತ್ರಗಳಲ್ಲಿ ಎರಡನೇ ದಿನ 600ಕ್ಕಿಂತ ಹೆಚ್ಚಿನ ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಪಡೆದುಕೊಂಡ ಏಕೈಕ ಚಿತ್ರ ಎನಿಸಿಕೊಂಡಿದ