ಮಾರುತಿ ಕಾರು ಮಾರಾಟ ಮೇಳ

ಬೆಂಗಳೂರು: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ಮೆಗಾ ಕಾರ್ ಫೆಸ್ಟಿವಲ್ ಆಯೋಜಿಸಿದೆ.
ಪ್ರತಿ ಗ್ರಾಹಕರ ಬಜೆಟ್‌ಗೆ ಹೊಂದುವಂತೆ ಹ್ಯಾಚ್‌ಬ್ಯಾಕ್‌ನಿಂದ ಎಸ್‌ಯುವಿವರೆಗೆ ಸೆಕೆಂಡ್ ಹ್ಯಾಂಡ್ ಕಾರುಗಳು ಇಲ್ಲಿ ಲಭ್ಯ ಇರುವುದರಿಂದ ಮೇಳವು ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ.
ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಪ್ಯಾಂಟಲೂನ್ಸ್ ಮಳಿಗೆ ಎದುರು, ಮಂಗಳೂರಿನಲ್ಲಿ ಅತ್ತಾವರ ಕಟ್ಟೆ ಬಳಿ, ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಇರುವ ಹಬೀಬ್ ಮೈದಾನದಲ್ಲಿ, ಮೈಸೂರಿನಲ್ಲಿ ಬಲಮುರಿ ಗಣಪತಿ ದೇವಸ್ಥಾನದ ಬಳಿಯ ಮೈದಾನದಲ್ಲಿ ಈ ಕಾರ್ ಫೆಸ್ಟಿವಲ್ ನಡೆಯುತ್ತಿದೆ